ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ಮಾಡುವುದು ಪೋಷಕರ ಕರ್ತವ್ಯ

ಬೇಲೂರು : ತಾಲೂಕಿನ ಅರೇಹಳ್ಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಎರಡು ದಿನಗಳಿಂದ ವಿವಿಧ ಶಾಲಾ ಮಕ್ಕಳಿಗೆ ಜಮಾಅತೆ ಇಸ್ಲಾಮೀ ಹಿಂದ್ ನ ವತಿಯಿಂದ ಆಯೋಜಿಸಲಾಗಿದ್ದ ಗುಲಿಸ್ತಾನ್ ಚಿಲ್ಡ್ರನ್ ಫೆಸ್ಟಿವಲ್ಸ್ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವರು ಕುರುಣಿಸಿದಂತೆ ಪ್ರತಿಯೊಂದು ಮಕ್ಕಳು ವೈಶಿಷ್ಟ್ಯಪೂರ್ಣದಿಂದ ಕೂಡಿರುತ್ತಾರೆ.

ಅವರಲ್ಲಿ ಚಿಕ್ಕಂದಿನಲ್ಲಿಯೆ ಸ್ಪರ್ಧಾ ಮನೋಭಾವ ಮೂಡಿಸಿದರೆ ಮಾತ್ರ ಪ್ರಸ್ತುತ ಜಗತ್ತಿನಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದು.ಹಾಗಾಗಿ ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಬೇಕು ಎಂದರು.

ಜಮಾಅತೆ ಇಸ್ಲಾಮೀ ಹಿಂದ್ ನ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಯೂಸುಫ್ ಕನ್ನಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಧರ್ಮಾತೀತವಾಗಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಮಕ್ಕಳ ಮುಂದಿನ ಭವಿಷ್ಯವನ್ನು ನಾವು ಇಂದಿನಿಂದಲೆ ರೂಪಿಸಬೇಕು. ಚಿಕ್ಕ ಮಕ್ಕಳಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸುವುದರಿಂದ ಭವ್ಯ ಭಾರತದ ಪ್ರಜೆಯನ್ನಾಗಿ ಮಾಡುವುದು ಪ್ರತಿ ಪೋಷಕರ ಕರ್ತವ್ಯವಾಗಿದೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಸಂಕಪ್ಪ, ಜಮಾಅತೆ ಇಸ್ಲಾಮೀ ಹಿಂದ್ ನ ಹೋಬಳಿ ಅಧ್ಯಕ್ಷ ಮೌಲಾನಾ ಅಬ್ದುಲ್ಲಾ ಉಮ್ರೀ, ಮಂಗಳೂರು ವಲಯದ ಜಿಲ್ಲಾಧ್ಯಕ್ಷ ಸೈಯೀದ್ ಇಸ್ಮಾಯಿಲ್, ಕಾಫಿ ಬೆಳೆಗಾರರಾದ ಫರಾಜ್ ರೆಹಮಾನ್, ಶಾಹೀದ್ ನವೀದ್, ಸೈಯ್ಯದ್ ವಾಹಿದ್ ಶಾ ಹುಸೈನಿ, ಮೌಲಾನಾ ಇಝಾರ್ ಅಸರ್ ಉಮ್ರೀ ಹಾಗೂ ಜಮಾಅತೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *