ಚನ್ನರಾಯಪಟ್ಟಣ: ತಾಲೂಕಿನ ಜೋಗಿಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾಂಗ್ರೆಸ್ ಬೆಂಬಲಿತ ನೂತನ ಪದಾಧಿಕಾರಿಗಳು ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಗೀತಾಗೋಪಾಲಸ್ವಾಮಿ ಮಾತನಾಡಿ 20ವರ್ಷಗಳಿಂದ ಯಾವುದೇ ಚುನಾವಣೆಯಾಗದೆ ಏಕಪಕ್ಷೀಯ ಆಡಳಿತ ಮಾಡಿಕೊಂಡು ಪ್ರಭಾವಿ ನಾಯಕರುಗಳು ದಬ್ಬಾಳಿಕೆ ನಡೆಸುತ್ತಿದ್ದರು.

ಆದರೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯನ್ನು ಸ್ಪರ್ಧಿಸಿ ಎಲ್ಲರೂ ಜಯಗಳಿಸಿ ಅಧಿಕಾರದ ಗದ್ದುಗೆ ಹಿಡಿದಿರುವುದು ಸಂತಸ ತಂದಿದೆ.

ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘಗಳಿಗೆ ಮಾದರಿಯಾಗಿದ್ದು ಎಲ್ಲರೂ ಮುಂದೆ ಬಂದು ಚುನಾವಣೆ ಎದುರಿಸಬೇಕು ಇದು ಪ್ರಜಾಪ್ರಭುತ್ವದ ನಾಡು ಯಾರ ಆಸ್ತಿಯೂ ಅಲ್ಲ ಯಾರ ಸ್ವತ್ತೂ ಅಲ್ಲ. ತಾಲೂಕಿನ ಬಹುತೇಕ ಎಲ್ಲಾ ಹಾಲು ಉತ್ಪಾದಕ ಸಂಘಗಳಲ್ಲಿ ಸಾಕಷ್ಟು ಮೋಸಗಳು ನಡೆಯುತ್ತಿವೆ ಇದನ್ನು ನೀಗಿಸಲು ನಿಮ್ಮ ಹಕ್ಕನ್ನು ಕೇಳಲು ನಿಮ್ಮ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳಿ ಎಂದರು.

ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಾದ ಆಶಾ(91), ನಾಗಮಣಿ(82), ನಂಜಮ್ಮ(84), ಪವಿತ್ರ(94), ಮಣಿ(86), ರಾಧ(91), ಲಕ್ಷö್ಮಮ್ಮ(91), ಶೋಭ(85), ಶಾಂತಮ್ಮ(79), ಸುಲೋಚನ(86) ಮತಗಳನ್ನು ಪಡೆದು ಜಯಗಳಿಸಿದರೆ. ಅವಿರೋಧವಾಗಿ ವಿಜಯಲಕ್ಷ್ಮಿ , ಧನಲಕ್ಷ್ಮಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಲೀಲಾ ಕರ್ತವ್ಯನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ನಟೇಶ್, ದಿನೇಶ್, ಮಂಜೇಗೌಡ, ಸಂಜು, ಶಂಕರೇಗೌಡ, ಸ್ವಾಮಿ, ಸಚಿನ್, ಸುಧಾಕರ್, ಅಭಿ, ದರ್ಶನ್ ಮತ್ತಿತರಿದ್ದರು.ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಹೊಡೆದು ಸಿಹಿ ಹಂಚಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *