
ಚನ್ನರಾಯಪಟ್ಟಣ: ಪ್ರತಿವರ್ಷ ಜನವರಿ ಅಂತ್ಯವು ದೀರ್ಘ ದಿನಗಳ ಪ್ರಾರಂಭವನ್ನು ಸೂಚಿಸುತ್ತದೆ. ಹಿಂದಿನ ಕಾಲದಿಂದಲೂ , ಈ ಸಂದರ್ಭವನ್ನು ಭಾರತ ಮತ್ತು ನೇಪಾಳದಲ್ಲಿ ಸುಗ್ಗಿಯ ಹಬ್ಬ ಅಥವಾ ಮಕರ ಸಂಕ್ರಾಂತಿಯಾಗಿ ಆಚರಿಸಲಾಗುತದೆ
ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯ ಹಬ್ಬದ ಉತ್ಸವಕ್ಕೆ ಕರ್ನಾಟಕ ರಾಜ್ಯವು ಸಜ್ಜಾಗುವುದರೊಂದಿಗೆ, “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಎಂಬುದು ಪ್ರಚಲಿತದಲ್ಲಿರುವ ಕನ್ನಡದ ಮಾತಾಗಿದೆ. ಇದರರ್ಥ ಒಬ್ಬರು ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ತಿನ್ನಬೇಕು ಮತ್ತು ಒಳ್ಳೆಯ ಮಾತುಗಳನ್ನು ಹೇಳಬೇಕು. ಈ ಮಾತು ‘ಎಳ್ಳು ಬೀರೋದು’ ಎಂಬ ಬಹಳ ಮುಖ್ಯವಾದ ಸಂಪ್ರದಾಯವನ್ನು ಅನುಸರಿಸುತ್ತದೆ.
ಮಹಿಳೆಯರು ಮತ್ತು ಮಕ್ಕಳು ಮನೆ-ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು ಮತ್ತು ಬೆಲ್ಲದ ಮಿಶ್ರಣ ಮತ್ತು ಸಕ್ಕರೆ ಅಚ್ಚನ್ನು ಒಳಗೊಂಡಿರುವ ತಟ್ಟೆಗಳನ್ನು ಬದಲಿಸಿಕೊಳ್ಳುತ್ತಾರೆ.
ಈ ಸಂಪ್ರದಾಯವು ಇದರಂತೆ 5 ಜನ ಹಿರಿಯ ಮುತ್ತೈದೆಯರಿಗೆ ಅರಿಶಿನ ಕುಂಕುಮ ಎಳ್ಳು ಬೆಲ್ಲ ನೀಡಿ ಸಂತೋಷವನ್ನು ಹಂಚಿಕೊಳ್ಳುಲು ಬಿಸಿಲು ಚಳಿ ಎನ್ನದೆ ಬೀದಿ ಬದಿ ವ್ಯಾಪಾರಿಗಳಿಗೆ ಎಳ್ಳು ಬೆಲ್ಲ ಹಂಚುವ ಮೂಲಕ ಸಂಕ್ರಾಂತಿ ಸಂಭ್ರಮದೋದಿಗೆ ನಾಡಿನ ಜನತೆಗೆ ಮಕರ ಸಂಕ್ರಾಂತಿ ಶುಭಾಶಯಗಳು ತಿಳಿಸಿದರು




