
ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿಯ ನಲ್ಲೂರು ಗ್ರಾಮದಲ್ಲಿ ನಡೆದ ಗ್ರಾಮ ದೇವತೆ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನನ್ನು ಪಡೆದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ ನಲ್ಲೂರು ಗ್ರಾಮ ದೇವತೆ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ತುಂಬಾ ವಿಜೃಂಭಣೆಯಿಂದ ಹಾಗೂ ಸಡಗರದಿಂದ ನಡೆಯಲು ಕಾರಣಕರ್ತರಾದ ಎಲ್ಲಾ ಭಕ್ತಾದಿಗಳಿಗೂ ತುಂಬು ಹೃದಯದ ಅಭಿನಂದನೆಗಳು ಎಂದರು,
ದೇವಸ್ಥಾನದ ಅಭಿವೃದ್ಧಿಗೆ ಗ್ರಾಮಸ್ಥರು ಐದು ಲಕ್ಷ ಅನುದಾನವನ್ನು ಕೇಳಿಕೊಂಡಿದ್ದು ಮುಂದಿನ ಜೂನ್ ಒಳಗಾಗಿ 5 ಲಕ್ಷ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು, ಸಂಕ್ರಾಂತಿ ಹಬ್ಬದ ಶುಭಾಶಯಗಳು ನ ಕೋರಿ ಎಲ್ಲರಿಗೂ ತಾಯಿಯ ಆಶೀರ್ವಾದದಿಂದ ಮಳೆಯಾಗಿ ಕೆರೆಕಟ್ಟೆಗಳು ತುಂಬಲಿ ಹಾಗೂ ರೈತರು ಬೆಳೆದ ಎಲ್ಲಾ ಬೆಳೆಗೂ ಬೆಂಬಲ ಬೆಲೆಯು ದೊರೆಯಲಿ ಎಂದು ಶುಭ ಹಾರೈಸಿದರು.
ವಿಶೇಷ ಪೂಜೆಯ ಸೇವಾರ್ಥದಾರರುಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಆಲನಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶಾಸಕರಾದ ಸಿ.ಎನ್.ಬಾಲಕೃಷ್ಣ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಎನ್ ಆರ್ ಪುರುಷೋತ್ತಮ್,ಮಾಜಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ದಿನೇಶ್, ಗುಡಿಗೌಡ ಪ್ರದೀಪ್, ಗುಡಿಗೌಡ ರಾಮಸ್ವಾಮಿ, ವಿಶ್ವನಾಥ, ಪ್ರಕಾಶ್, ಪ್ರಥಮ ದರ್ಜೆ ಗುತ್ತಿಗೆದಾರ ಎನ್ ಆರ್ ಸಂತೋಷ್,ಮಾಜಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ನಲ್ಲೂರು ಮತ್ತು ಆಲನಹಳ್ಳಿ ಗ್ರಾಮಸ್ಥರು ಹಾಜರಿದ್ದರು.






