ಸಕಲೇಶಪುರ: ಪುರಸಭೆ ಸದಸ್ಯೆ ಅನ್ನಪೂರ್ಣೇಶ್ವರಿ ರವರ ಮೇಲೆ ಜಾತಿನಿಂದನೆ ಹಾಗೂ ಮನೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಡಿರುವ ಆರೋಪಗಳು ಸುಳ್ಳು ಎಂದು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಕೆ.ಪಿ.ಸಿ ಸಿ ಯೆಡೆಹಳ್ಳಿ ಆರ್. ಮಂಜುನಾಥ್ ಕಾಂಗ್ರೆಸ್ ಎಸ್ಸಿ ಘಟಕದ ಮಾಜಿ ಅದ್ಯಕ್ಷ ಬೈಕೆರೆ ಹಾಗೂ ಪುರಸಭೆ ಸದಸ್ಯ ಅನ್ನಪೂರ್ಣೇಶ್ವರಿ ಇವರುಗಳು ಇತ್ತಿಚೆಗೆ ಕೆಲವರು ಹಾಸನದಲ್ಲಿ ಸುದ್ದಿಗೋಷ್ಟಿ ಹಾಗೂ ಜಿಲ್ಲಾಧಿಕಾರಿರವರಿಗೆ ಮನವಿ ನೀಡಿ ಮಾಡಿರುವ ಅರೋಪಗಳು ಸುಳ್ಳು ಎಂದು ಸ್ಪಷ್ಟಪಡಿಸಿದರು.ದಲಿತರ ಮೇಲೆ ದೌರ್ಜನ ನಡೆದಂತಹ ಸಂದರ್ಭದಲ್ಲಿ ನಾವುಗಳು ಎಲ್ಲರೂ ಒಗ್ಗಟ್ಟಾಗಿ ಅದನ್ನ ವಿರೋಧಿಸಿದ್ದೇವೆ. ಆದರೆ ಸತ್ಯಕ್ಕೆ ದೂರವಾದ ಆರೋಪಗಳು ಮಾಡಿದಾಗ ಮೌನವಾಗುವುದು ಸರಿಯಾದ ಕ್ರಮವಲ್ಲ ಎಂದು ವಾಸ್ತವವನ್ನು ಹೇಳಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ ಎಂದು ಹೇಳಿದರು.

ಅನ್ನಪೂರ್ಣೇಶ್ವರಿ ರವರ ಕುಟುಂಬ ಎಂದಿಗೂ ದಲಿತರಾಗಲಿ ಇತರೆ ವರ್ಗದ ಜನರೊಂದಿಗೆ ದ್ವೇಷ ಮಾಡುವಂತಹ ಕೆಲಸಗಳನ್ನು ಮಾಡಿಲ್ಲ ಸರ್ವ ಸಮಾಜದ ಜೊತೆ ಬೆರೆತು ಬದುಕುವಂತಹ ಮನಸ್ಥಿತಿಯವರು ಇವರುಗಳ ಮೇಲೆ ದಲಿತ ವಿರೋಧಿ ಇಲ್ಲಸಲ್ಲದ ಆರೋಪ ಮಾಡುವುದು ನಿಜಕ್ಕೂ ಆತಂಕ ಪಡುವಂತಹದ್ದಾಗಿದೆ. ಇಂಥಹ ಹುರುಳು ಇಲ್ಲದ ಅರೋಪಗಳು ಪಕ್ಷಕ್ಕೆ ಮುಜುಗರ ತರುವಂತಹದ್ದಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮಹಿಳಾ ಘಟಕದ ಅದ್ಯಕ್ಷೆ ಹಾಗೂ ಪುರಸಭೆ ಸದಸ್ಯೆ ಅನ್ನಪೂರ್ಣೇಶ್ವರಿ ಮಾತನಾಡಿನಾನು ಮಾನವತ ವಾದಿ, ದ್ವೇಷ ಮಾಡುವ ಅಗತ್ಯ ನನಗಿಲ್ಲ, ಯಾರು ಬೇಕಾದರೂ ಸ್ಥಳ ಪರಿಶೀಲಿಸಬಹುದು, ಇದಕ್ಕಾಗಿ ನಾನು ಸದಾ ಸಿದ್ದಳಿರುತ್ತೇನೆ,ನನ್ನ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾದದ್ದು, ದಲಿತ ವಿರೋಧಿ ಎನ್ನುವಂತಹ ಮಾತು ಕೇಳಲು ನನಗೆ ಬಹಳ ನೋವಾಗುತ್ತದೆ. ನನ್ನ ತಂದೆ, ತಾಯಿ ಸರ್ವ ಜನಾಂಗದೊಂದಿಗೆ ಬೆರತು ಬಾಳಿದವರು, ನಾನು ಅದೇ ಮಾರ್ಗ ಅನುಸರಿಸುತ್ತಿದ್ದೇನೆ, ಸಮಸ್ಯೆ ಇರುವುದು ಅಕ್ಕ ಪಕ್ಕದ ಮನೆ ವಿಚಾರ,ಈ ಪ್ರಕರಣ ನ್ಯಾಯಾಲಯದಲ್ಲಿದೆ, ಇವರು ತಂದಿದ್ದ ತಡೆಯಾಜ್ಞೆ ವಜಾವಾಗಿದೆ. ನ್ಯಾಯ ನನ್ನ ಪರ ಇದೆ ಎಂದು ಇಲ್ಲಸಲ್ಲದ ಸುಳ್ಳು ಅರೋಪ ಮಾಡುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಕೊಲ್ಲಹಳ್ಳಿ ಸಲೀಂ, ಪುರಸಭೆ ಸದಸ್ಯ ಅಣ್ಣಪ್ಪ, ಬೈಕೆರೆ ದೇವರಾಜು ಕಾಂಗ್ರೆಸ್ ಎಸ್ಸಿ ಎಸ್ಟಿ ಘಟಕದ ಅದ್ಯಕ್ಷ ಪ್ರಶಾಂತ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *