
ಬೇಲೂರು : ಕಾಡಾನೆಗಳ ಹಿಂಡಿನ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶ
ಅಡಿಕೆ, ಜೋಳ, ಶುಂಠಿ, ತೆಂಗಿನಮರಗಳನ್ನು ನಾಶಪಡಿಸಿರುವ ಗಜಪಡೆ
ನೀರಿಗೆ ಹಾಯಿಸುವ ಪಂಪ್‌ಗಳನ್ನು ತುಳಿದು ಹಾಕಿರುವ ಕಾಡಾನೆಗಳು
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಬಿಕ್ಕೋಡು ಹೋಬಳಿಯ ಬೆಳಗುಲಿ ಗ್ರಾಮದಲ್ಲಿ ಘಟನೆ
ಗ್ರಾಮದ ಜಯದೇವ, ರುದ್ರೇಶ್ ಎಂಬುವವರಿಗೆ ಸೇರಿದ ನಾಲ್ಕು ಎಕರೆ ಜಮೀನು
ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆಗಳನ್ನು ಸಂಪೂರ್ಣ ಹಾಳು ಮಾಡಿರುವ ಕಾಡಾನೆಗಳ ಹಿಂಡು
ಅಪಾರ ಪ್ರಮಾಣದ ಬೆಳೆ ಕಳೆದುಕೊಂಡು ಕಂಗಾಲಾದ ರೈತರು
ಸ್ಥಳಕ್ಕೆ ಶಾಸಕ ಎಚ್.ಕೆ.ಸುರೇಶ್, ತಹಸೀಲ್ದಾರ್ ಮಮತಾ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ
ಕಳೆದ ಒಂದು ವಾರದಿಂದ ಬೆಳಗುಲಿ, ಮಾಳೇಗೆರೆ, ಕೊತ್ತನಹಳ್ಳಿ ಗ್ರಾಮಗಳ ಸುತ್ತಮುತ್ತ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು
ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಒಂದೆಡೆ ಕಾಡಾನೆ ಸೆರೆ ಕಾರ್ಯಾಚರಣೆ, ಇನ್ನೊಂದೆಡೆ ಕಾಡಾನೆ ಹಾವಳಿಯಿಂದ ಬೆಳೆ ನಾಶ
ರೈತರು ತೀರ ಸಂಕಷ್ಟದಲ್ಲಿ ಇರುವಂತಹ ಸಂದರ್ಭದಲ್ಲಿ ಈ ರೀತಿಯ ಬೆಳೆ ಹಾನಿಯಾದರೆ ನಾವುಗಳು ವಿಷ ಕುಡಿಯಬೇಕು ಒಂದು ಕಡೆ ಆನೆಗಳನ್ನು ಹಿಡಿಯುವ ಸಂದರ್ಭದಲ್ಲಿ ನಾವು ಕಷ್ಟಪಟ್ಟು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ ಇದರ ಜೊತೆಗೆ ಸುಮಾರು ಐದು ದಿನಗಳಿಂದಲೂ ಸಹ ನಮ್ಮ ತೋಟಗಳಿಗೆ ನುಗಿರುವ ಕಾಡಾನೆಗಳ ಹಿಂದು, ಸಂಪೂರ್ಣ ಅಡಿಕೆ ತೆಂಗು ಜೋಳ ಇನ್ನಿತರ ಬೆಳೆಗಳನ್ನು ನಾಶ ಮಾಡಿ ಸಂಪೂರ್ಣ ತುಳಿದು ಹಾಕಿವೆ ಎಂದು ಕಣ್ಣೀರ್ ಹಾಕಿದರು





