ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿರಲಿಲ್ಲ. ಜೆಡಿಎಸ್‌ ಮತ, ಜೆಡಿಎಸ್‌ಗೆ ಬಂದಿದೆ. ಸೋಲಿನ ವಿಶ್ಲೇಷಣೆ ಮಾಡುವವರು ಒಪ್ಪಂದದ ಬಗ್ಗೆ ಹೇಳುತ್ತಾರೆ ಎಂದು ನೂತನ ಶಾಸಕ ಸ್ವರೂಪ್ ಪ್ರಕಾಶ್‌ ಹೇಳಿದರು.ಆದಿಚುಂಚನಗಿರಿಯಲ್ಲಿ ಕಾಲಭೈರೇಶ್ವರ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿ ಅವರ ದರ್ಶನ, ಆಶೀರ್ವಾದ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಭವಾನಿ ಅಕ್ಕ ನನ್ನನ್ನು 3ನೇ ಮಗ ಅಂದಿದ್ದಾರೆ. ಕುಮಾರಣ್ಣ, ರೇವಣ್ಣ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ. ಮುಂದೆ ಅವರ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತೇನೆ ಎಂದರು.ನಿಖಿಲ್ ಅವರ ಸೋಲು ನನಗೆ ವೈಯಕ್ತಿಕವಾಗಿ ಬೇಸರವಾಗಿದೆ. ಅವರು ಸೋಲಬಾರದಿತ್ತು, ರಾಮನಗರದ ಬಗ್ಗೆ ನನಗೆ ಗೊತ್ತಿಲ್ಲ. ಹೀಗಾಗಿ ನಿಖಿಲ್ ಅವರು ಏಕೆ ಸೋತರು ಎನ್ನುವುದು ಅರ್ಥವಾಗುತ್ತಿಲ್ಲ. ನಾನು‌ ಹಾಗೂ ನನ್ನ ಹಾಸನದ ಜನತೆ ನಿಖಿಲ್ ಅವರ ಜೊತೆಗೆ ಇರುತ್ತೇವೆ ಎಂದರು.ನಮ್ಮ ಪಕ್ಷದ ನಾಯಕರ ಶ್ರಮದಿಂದ ನಾನು ಗೆಲುವು ಸಾಧಿಸಿದ್ದೇನೆ. ಹಾಸನದ ಎಲ್ಲ ಕಾರ್ಯಕರ್ತರು ಶ್ರಮಿಸಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದರು.ಆದಿಚುಂಚನಗಿರಿಗೆ ಬಂದ ಸ್ವರೂಪ್ ಮೊದಲು ಕಾಲಭೈರವೇಶ್ವರನ ದರ್ಶನ ಪಡೆದರು. ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದರು. ಅಲ್ಲಿಂದ ಬೆಂಗಳೂರಿಗೆ ತೆರಳಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *