ಹಾಸನ: ಬರೀ ತರಗತಿಯಲ್ಲಿ ಪಾಠ ಕಲಿಯುವುದಕ್ಕೆ ಆಗುವುದಿಲ್ಲ. ಏನು ತರಬೇತಿ ಅವಶ್ಯಕತೆ ಇದಿಯೋ ಅಂತಹ ತರಬೇತಿ ಕೊಡಬೇಕಾಗಿದ್ದು, ವಿದ್ಯಾರ್ಥಿಗಳಿಗೆ ಹೊರದೇಶದಲ್ಲೂ ಸಹ ಅಧ್ಯಾಯನ ಮಾಡಲು ಅವಕಾಶ ಸಿಗಬೇಕು ದೃಷ್ಠಿಯಲ್ಲಿ ಆಸ್ಟ್ರೇಲಿಯಾದ ಎಂಪ್ಲಾಯಿಬಿಲಿಟಿ ಲ್ಯೇಫ್ ಪ್ರ್ವೈವೇಟ್ ಲಿಮಿಟೆಡ್ ಫೆಡರೇಶನ್ ಯೂನಿವರ್ಸಿಟಿ, ಆಸ್ಟ್ರೇಲಿಯಾದೊಂದಿಗೆ ಸಹಯೋಗ ಒಪ್ಪಂದ ಮಾಡಿಕೊಳ್ಳುತ್ತಿರುವುದಾಗಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಲ್ಯೂಮ್ನಿ ಹಾಲ್ ನಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಮಲೆನಾಡು ಇಂಜಿನೀಯರಿಂಗ್ ಕಾಲೇಜ್ ಹಾಗೂ ಆಸ್ಟ್ರೇಲಿಯಾದ ಎಂಪ್ಲಾಯಿಬಿಲಿಟಿ ಲ್ಯೇಫ್ ಪ್ರ್ವೈವೇಟ್ ಲಿಮಿಟೆಡ್ ಫೆಡರೇಶನ್ ಯೂನಿವರ್ಸಿಟಿ, ಆಸ್ಟ್ರೇಲಿಯಾದೊಂದಿಗೆ ಸಹಯೋಗ ಒಪ್ಪಂದ ಕಾರ್ಯಕ್ರಮದ ಉದ್ಘಾಟನೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,

ಮಲೆನಾಡು ಇಂಜಿನಿಯರಿಂಗ್ ಕಾಲೇಜು ಜೊತೆಗೆ ಆಸ್ಟ್ರೇಲಿಯದ ಫೆಡರೇಷನ್ ಯುನಿವರ್ಸಿಟಿಯದಿಂದ ಇಲ್ಲಿಗೆ ಬಂದಿದ್ದು, ತಾಂತ್ರಿಕ ಶಿಕ್ಷಣ ಎಂದರೇ ಬರೀ ತರಗತಿಯಲ್ಲಿ ಪಾಠ ಕಲಿಯುವುದು ಒಂದು ರೀತಿ ಆಗುತ್ತಿಲ್ಲ. ಇಂಡಸ್ಟ್ರೀಯಲ್ ಜೊತೆ ಕೆಲಸ ಮಾಡಬೇಕು. ಯಾವ ಕಂಪನಿಯಲ್ಲಿ ಏನು ತರಬೇತಿ ಅವಶ್ಯಕತೆ ಇದಿಯೋ ಅಂತಹ ತರಬೇತಿ ಕೊಡುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೂ ಸಹ ಹೊರದೇಶದಲ್ಲೂ ಸಹ ಅಧ್ಯಾಯನ ಮಾಡಲು ಅವಕಾಶ ಸಿಗಬೇಕು ಎಂದರು.

ಅನೇಕ ಕೈಗಾರಿಕೆಗಳ ಜೊತೆ ಅಲ್ಲಿರುವ ಪರಿಸ್ಥಿತಿಗಳನ್ನು ಅಧ್ಯಾಯನ ಮಾಡುವ ದೃಷ್ಠಿಯಲ್ಲಿ ಆಸ್ಟ್ರೇಲಿಯಾ ಫೆಡರೇಷನ್ ಯುನಿವರ್ಸಿಟಿಯ ಮುಖ್ಯಸ್ಥರು ಬಂದಿದ್ದು, ಅವರ ಜೊತೆ ಒಡಂಬಡಿಕೆ ಮಾಡಿ ಅವರು ನಮ್ಮ ಕಾಲೇಜಿನಲ್ಲಿ ಒಂದು ಕಛೇರಿಯನ್ನು ತೆರೆಯುತ್ತಾರೆ. ನಮ್ಮ ಎಂಸಿಇ ಕಾಲೇಜು ಸಂಸ್ಥೆಯನ್ನು ಆಸ್ಟ್ರೇಲಿಯಾದಲ್ಲಿ ಒಂದು ಕಛೇರಿಯನ್ನು ತೆರೆದು ಮುಂದಿನ ದಿನಗಳಲ್ಲಿ ಹೆಚ್ಚಿನ ಅಧ್ಯಾಯನ ಮಾಡಲು ಆಸ್ಟ್ರೇಲಿಯಕ್ಕೆ ಹೋಗುವ ಅವಕಾಶವನ್ನು ಕಲ್ಪಿಸುತ್ತಿದ್ದೇವೆ.

ಭಾರತ ದೇಶದಲ್ಲೆ ಅನೇಕ ಕೈಗಾರಿಕೆಗಳಲ್ಲಿ ಹೋಗಿ ಅನುಭವ ಪಡೆದುಕೊಳ್ಳುವ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ನಮ್ಮ ಕಾಲೇಜಿನ ಅಂತಿಮ ವರ್ಷದ ಶಿಕ್ಷಣ ಮಾಡುವುದಕ್ಕೆ ಮೊದಲೆ ಅವರಿಗೆ ಒಳ್ಳೆಯ ಕೆಲಸ ಸಿಗಬೇಕು ಮತ್ತು ಅನೇಕ ಅವಕಾಶವನ್ನು ಸೃಷ್ಠಿ ಮಾಡಬೇಕು. ಓದಿದವರಿಗೆಲ್ಲಾ ಒಂದು ಕೆಲಸ ಸಿಗಬೇಕು ಎನ್ನುವ ದೃಷ್ಠಿಯಲ್ಲಿ ನಾವು ಆಸ್ಟ್ರೇಲಿಯದ ಫೆಡರೇಷನ್ ಯುನಿವರ್ಸಿಟಿಯ ಜೊತೆ ಒಂದು ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಅನುಭವ ಸಿಕ್ಕಿದಂತಾಗುತ್ತದೆ ಎಂದು ಹೇಳಿದರು.

ಈಗಾಗಲೇ ಹೊರ ದೇಶದ ಯೂನಿವರ್ಸಿಟಿ ಜೊತೆ ಒಡಂಬಡಿಕೆ ಮಾಡಿದ್ದರೂ ಸಹ ಇದೊಂದು ಮಹತ್ವದ ಹೆಜ್ಜೆ. ಆಸ್ಟ್ರೇಲಿಯಾದಿಂದ ಅವರೆ ಬಂದು ಯಾವ ಯಾವ ರೀತಿಯಲ್ಲಿ ನಾವು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೇವೆ ಎನ್ನುವ ವಿಚಾರದ ಬಗ್ಗೆ ಎಲ್ಲಾ ಅಧ್ಯಾಪಕರಿಗೆ ವಿಷಯವನ್ನು ತಿಳಿಸಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಫೆಡರೇಷನ್ ಯುನಿವರ್ಸಿಟಿಯ ಸಹಕಾರದಲ್ಲಿ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡುವ ಕಾರ್ಯಕ್ರಮವನ್ನು ಹಾಕಿಕೊಳ್ಳುವ ಯೋಜನೆ ಇದೆ. ವಿದ್ಯಾರ್ಥಿಗಳಿಗೆ ಕೆಲಸ ಸಿಗಲು ಯಾವ ಸ್ಕಿಲ್ ಬೇಕು ಅದನ್ನು ಕೊಡುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಎಲ್ಲಾರಿಗೂ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಫೆಡರೇಷನ್ ಯುನಿವರ್ಸಿಟಿಯ ಕಾರ್ಯನಿರ್ವಹಣಾಧಿಕಾರಿ ಡಾ ಮನೀಷ್ ಮಲ್ಹೋತ್ರಾ, ಸಹ ಕಾರ್ಯನಿರ್ವಹಣಾಧಿಕಾರಿ ಎಂಪ್ಲಾಯಿಬಿಲಿಟಿ ಲೈಪ್ ರಾಜದಾಸ್ ಗುಪ್ತ, ಸಮಿತಿಯ ಉಪಾಧ್ಯಕ್ಷ ಎಂಪ್ಲಾಯಿಬಿಲಿಟಿ ಲ್ಯೆಫ್ ರುಚಿಕಾ ಸನ್ರ್, ನಿರ್ದೇಶಕರಾದ ಅನಿರುದ್ಧ ಫಾಗ್ಟೆ, ಮ್ಯಾನೇಜರ್ ಅರುಣ್ ಹಿರಣ್ಣಯ್ಯ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಮ್ಯಾನೇಜರ್ ಶಿವರಾಮ್ ಕೃಷ್ಣಯ್ಯ, ಸಂಸ್ಥೆಯ ನಿರ್ದೇಶಕರಾದ ಪಾರ್ಶ್ವನಾಥ, ಡಿ.ಬಿ. ಹೇಮಂತ್ ಕುಮಾರ್, ಚೌಡವಳ್ಳಿ ಜಗದೀಶ್, ಹೆಚ್.ಎಲ್. ಗುರು ಮೂರ್ತಿ, ಜಿ.ಟಿ. ಕುಮಾರ್, ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ನಿರ್ದೇಶಕರಾದ ಡಾ. ಎಸ್. ಪ್ರದೀಪ್, ಮಲೆನಾಡು ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಜೆ. ಕೃಷ್ಣಯ್ಯ. ಕಾರ್ಯಕ್ರಮದ ಸಂಯೋಜಕರಾದ ಹಾಗೂ ಪ್ರಾಧ್ಯಾಪಕರಾದ ಡಾ ಶ್ರೀನಾಥ್ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಡೀನ್ ವರು. ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *