
ಹಾಸನ : ನಾವು ನೀಡಿದ ಗಡುವುನಂತೆ ಹೇಮಾವತಿಯಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿಸದಿದ್ದರೇ ಗೊರೂರಿನ ಇಂಜಿನಿಯರ್ ಕಛೇರಿಗೆ ಮುತ್ತಿಗೆ ಹಾಕಲಾಗುವುದು. ಈ ವೇಳೆ ಏನಾದರೂ ಅಹಿತಕರ ಘಟನೆ ಸಂಭವಿಸಿದರೇ ನಾವು ಮತ್ತು ರೈತರು ಜವಬ್ಧಾರರಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದರು.
ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಗೊರೂರು ನೀರು ವಿಚಾರವಾಗಿ ರಾಕೇಶ್ ಸಿಂಗ್ ಗಮನಕ್ಕೂ ತರಲಾಗಿದ್ದು, ನೀರಾವರಿ ನಿಗಮ ಚೀಪ್ ಇಂಜಿನಿಯರ್ ಸೇರಿದಂತೆ ಎಲ್ಲಾರ ಗಮನಕ್ಕೆ ತರಲಾಗಿದೆ.
ತುಮಕೂರಿಗೆ ನೀರು ಕೊಡಿ ಬೇಡಾ ಎನ್ನಲ್ಲ. ಆದರೆ ನಮ್ಮ ಜಿಲ್ಲೆಯ ರೈತರ ದನಕರು, ಜನಕ್ಕೂ ಕುಡಿಯೋ ನೀರು ಕೊಡಿ. ಸರ್ಕಾರ ಇದಕ್ಕೂ ರಾಜಕೀಯ ಮಾಡಿದರೇ ಹೇಗೆ? ೧೪೪ ಸೆಕ್ಷೆನ್ ಎಂದರೆ ಓಡಾಡುವಾಗಿಲ್ಲ. ನೀರಿಗಾಗಿ ನಿಷೇದಾಜ್ಞೆ ಜಾರಿ ಮಾಡಿದರೆ ಹೇಗೆ? ಜಿಲ್ಲೆಗೆ ಆಗಿರೊ ಅನ್ಯಾಯದ ಬಗ್ಗೆ ದೇವೇಗೌಡರಿಗು ಹೇಳಿದ್ದೇನೆ. ಶುಕ್ರವಾರ ಸಂಜೆ ೫ ಗಂಟೆವರೆಗೂ ಗಡುವು ಕೊಟ್ಟಿದ್ದೇವೆ. ನೀರು ಬಿಡದಿದ್ದರೇ ನಾಳೆ ಜಲಾಶಯಕ್ಕೆ ರೈತರು ಮುತ್ತಿಗೆ ಹಾಕಬೇಕಾಗುತ್ತದೆ.
ಈಗಾಗಲೇ ರೈತರಿಗೆ ಹೇಳಲಾಗಿದ್ದು, ಈ ವೇಳೆ ಏನಾದರು ಅನಾಹುತವಾದರೇ ಆದರೆ ನಾವು ಜವಾಬ್ದಾರಿ ಅಲ್ಲ. ನೀರಾವರಿ ಸಲಹಾ ಸಮಿತಿ ಸಬೆ ನಡೆಸದೇ ಹೇಗೆ ನೀರು ಬಿಡಲಾಗಿದೆ. ಮಂಡ್ಯ ಕೆ.ಆರ್. ಪೇಟೆ ಭಾಗಕ್ಕೂ ನೀರಿಲ್ಲ. ಕೇವಲ ತುಮಕೂರು ಚುನಾವಣೆ ದೃಷ್ಟಿ ಇಟ್ಟುಕೊಂಡು ಹೋದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಹೇಮಾವತಿ ಜಲಾಶಯದ ಎರಡು ನಾಲೆಗೆ ನೀರು ಕೊಡಬೇಕು. ಇಲ್ಲವಾದರೆ ಕಾನೂನು ಹೋರಾಟ ಜೊತೆಗೆ ಹೊರಗು ಹೋರಾಟ ಮಾಡಲಾಗುವುದು. ಕಾಂಗ್ರೆಸ್ ಸರಕಾರದ ೯ ತಿಂಗಳ ಆಡಳಿತದಲ್ಲಿ ಕುಡಿಯುವ ನೀರಿಗೆ ರಾಜಕೀಯ ಮಾಡಿದರೇ ಹೇಗೆ? ಶನಿವಾರದಂದು ಮುಖ್ಯ ಇಂಜಿನಿಯರ್ ಕಛೇರಿಗೆ ಮುತ್ತಿಗೆ ಹಾಕುತ್ತೇವೆ. ಡಿಸಿ ಅವರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರದೆ ಹೋದರೆ ಅವರೇ ಹೊಣೆ ಆಗುತ್ತಾರೆ ಎಂದು ಕಿಡಿಕಾರದಲ್ಲದೇ ಎಚ್ಚರಿಸಿದರು.
ಇನ್ನು ಜಿಲ್ಲೆಯಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ ನಡೆಯುತ್ತಿದೆ. ರೈತರ ಪಂಪ್‌ಸೆಟ್ ಗೆ ದಿನದ ಒಂದು ಗಂಟೆಯೂ ವಿದ್ಯುತ್ ಸಿಗುತ್ತಿಲ್ಲ. ಹೀಗೆ ಆದರೆ ವಿದ್ಯುತ್ ಇಲಾಖೆ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ. ಜಿಲ್ಲೆಯಲ್ಲಿ ವಿದ್ಯುತ್ ಪರಿವರ್ತಕ ಸಿಗುತ್ತಿಲ್ಲ. ಸಚಿವರು ಏಳು ಗಂಟೆ ಕರೆಂಟ್ ಕೊಡ್ತೀವಿ ಅಂತಾರೆ. ಆದರೆ ನಮ್ಮ ಜಿಲ್ಲೆಗೆ ಮಾತ್ರ ಕೇವಲ ಒಂದು ಗಂಟೆ ಮಾತ್ರ ಕರೆಂಟ್ ಕೊಡ್ತಿದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಇನ್ನು ಹಾಸನ ಡೈರಿ ಚುನಾವಣೆ ಗೌಫ್ಯವಾಗಿ ನಡೆಸಲಾಗಿದೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೇವಣ್ಣನವರು, ೧೯೫ ದಿನಗಳ ಮೊದಲೆ ಜಿಲ್ಲಾಧಿಕಾರಿಗಳು ಪ್ರಕಟಣೆ ಹೊರಡಿಸುತ್ತಾರೆ. ನಾವಲ್ಲ ಹೊರಡಿಸುವುದು. ನಾವು ಇದರಲ್ಲಿ ಬಾಗಿಯಾಗಿರುವುದಿಲ್ಲ. ಡೈರಿ ಚುನಾವಣೆ ಡಿಸಿಯವರಿಗೆ ಬಿಟ್ಟಂತ ವಿಚಾರವಾಗಿದೆ ಎಂದು ಉತ್ತರಿಸಿದರು.
ದೇವೇಗೌಡರು ಮತ್ತು ಕುಮಾರಸ್ವಾಮಿ ಜೆಡಿಎಸ್ ಸರಿಯಿಲ್ಲ ಎಂದು ಅವರ ಅಳಿಯ ಬಿಜೆಪಿ ಸೇರಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಡಿ.ಕೆ. ಸುರೇಶ್ ದೂರಿದ್ದಾರೆ ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸಿ, ನಮ್ಮ ಪಕ್ಷ ಸರಿಯಿಲ್ಲ ಎಂದರೇ ಕಾಂಗ್ರೆಸ್ ನಮ್ಮ ಬಳಿ ೫ ವರ್ಷ ಇವರು ಕುಮಾರಣ್ಣನ ಬಳಿ ಏಕೆ ಬಂದು ನಿಮ್ಮ ಪಾದಗಳಿಗೆ ನಮುಸ್ಕಾರ ಮಾಡಿ ಆಶೀರ್ವಾದ ಕೇಳಿದರು. ದೇವೇಗೌಡರಿಗೆ ಎಲ್ಲಾ ಅನುಭವವಿದೆ ಎಂದು ಹೇಳಿದರು.
