ಸಕಲೇಶಪುರ : ತಾಲೂಕಿನ ಹಾನುಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾನುಬಾಳು ವೃತ್ತದಲ್ಲಿ ದಿನಾಂಕ 15/3/2024 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಸನ, ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಸಕಲೇಶಪುರ, ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಐ ಸಿ ಟಿ ಸಿ ಕೇಂದ್ರ, ಎನ್ ಸಿ ಡಿ ವಿಭಾಗ ಪ್ರಾಥಮಿಕ ಆರೋಗ್ಯ ಕೇಂದ್ರ ಹಾನುಬಾಳು, ಗ್ರಾಮ ಪಂಚಾಯಿತಿ ಹಾನುಬಾಳು, ಇವರ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು

ಈ ಸಂದರ್ಭದಲ್ಲಿ ಬಿ ಪಿ, ಶುಗರ್, ಹೆಚ್ ಐ ವಿ, ಕ್ಯಾನ್ಸರ್, ಕ್ಷಯ, ರೋಗಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ತಪಾಸಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾನುಬಾಳು ವೈದ್ಯಾಧಿಕಾರಿಗಳಾದ ಡಾಕ್ಟರ್ ನಿಶ್ಚಯ್ ಸಿಬ್ಬಂದಿ ವರ್ಗ, ತಾಲೂಕು ಎನ್ ಸಿ ಡಿ ವೈದ್ಯಾಧಿಕಾರಿಗಳಾದ ಡಾಕ್ಟರ್ ಪ್ರಮೋದ್ ಸಿಬ್ಬಂದಿ ವರ್ಗ, ತಾಲೂಕು ಐಸಿಟಿಸಿ ವಿಭಾಗ ಮತ್ತು ಕ್ಷಯ ರೋಗ ಮೇಲ್ವಿಚಾರಕರಾದ ಬಿ ಇ ಮಧು, ಹಾಗೂ ಹಾನುಬಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂತೋಷ್ ಕುಮಾರ್, ಸದಸ್ಯರಾದ ಸುರೇಶ್, ಯೋಗೇಶ್, ಮೋಹನ್ ಅಚ್ಚರಡ್ಡಿ, ಸೇರಿದಂತೆ ಇತರ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *