
ಹಾಸನ: ನಗರದ ಎನ್.ಆರ್. ವೃತ್ತದಲ್ಲಿ ಇರುವ ಪುನೀತ್ ಪುತ್ಥಳಿ ಆವರಣದಲ್ಲಿ ಡಾ. ರಾಜಕುಮಾರ್, ಪುನೀತ್ ರಾಜಕುಮಾರ್ ಹಾಗೂ ಡಾ. ಶಿವರಾಜಕುಮಾರ್ ಅಭಿಮಾನಿ ಸಂಘದ ಸಂಯುಕ್ತಾಶ್ರಯದಲ್ಲಿ ಪುನೀತ್ ರಾಜಕುಮಾರ್ ರವರ ೪೯ನೇ ವರ್ಷದ ಜನ್ಮದಿನದ ಅಂಗವಾಗಿ ಬೃಹತ್ ಕೇಕ್ ಕತ್ತರಿಸಿದರು. ಸಾರ್ವಜನಿಕರಿಗೆ ಉಚಿತ ನೇತ್ರಾ ಪರೀಕ್ಷಾ ತಪಾಸಣಾ ಶಿಬಿರ, ಮದ್ಯಾಹ್ನ ಬಿರಿಯಾನಿ ಬೋಜನ ಮತ್ತು ಐಸ್ಕ್ರೀಮ್ ನೀಡಲಾಯಿತು.
ಇದೆ ವೇಳೆ ಶಿವರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ರತೀಶ್ ಮಾಧ್ಯಮದೊಂದಿಗೆ ಮಾತನಾಡಿ, ಈ ಪ್ರತಿಮೆ ಪ್ರತಿಷ್ಠಾಪಿಸಿ ಒಂದು ವರ್ಷಗಳು ಕಳೆದಿದೆ. ಪುನಿತ್ ರಾಜಕುಮಾರ್ ಅವರ ೪೯ನೇ ವರ್ಷದ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಅಭಿಮಾನಿಗಳು, ಹಿತೈಸಿಗಳು ಈ ಸಂಘಟನೆಗೆ ಸಹಕರಿಸಿದ್ದಾರೆ.
ಈ ವೇಳೆ ಮಂಜುನಾಥ ಐ ಕೇರ್ ಇವರಿಂದ ಉಚಿತ ನೇತ್ರಾ ಪರೀಕ್ಷಾ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶಿವರಾಜಕುಮಾರ್ ಅವರು ಹೆಚ್ಚಿನ ಸಿನಿಮಾದಲ್ಲಿ ಭಾಗವಹಿಸಿ ರಾಜಕುಮಾರ್ ಮೊಮ್ಮಗನಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಪುನೀತ್ ರಾಜಕುಮಾರ್ ಅವರಿಗೆ ಪ್ರಿಯವಾದ ಬಿರಿಯಾನಿಯನ್ನು ಮಾಡಿಸಿ ಅಭಿಮಾನಿಗಳಿಗೆ ವಿತರಿಸುತ್ತಿರುವುದಾಗಿ ತಿಳಿಸಿದರು.
ಇದೆ ವೇಳೆ ಸಂಘದ ಕುಮಾರ್ ಮಹಂತೇಶ್, ಗಂಗಾಧರ್, ವಕೀಲರಾದ ಪ್ರಸನ್ನಕುಮಾರ್, ರವಿ, ವಿವೇಕ್ ರಾಜ್, ಸಾಗರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪ್ರೇಮಮ್ಮ ಇತರರು ಉಪಸ್ಥಿತರಿದ್ದರು.


