ಮುಸ್ಲಿಂ ಬಾಂಧವರಿಂದ ಈದ್ ಉಲ್ ಫಿತರ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯ ಮೇಲನಹಳ್ಳಿಯಲ್ಲಿರುವ ಈದ್ಗಾ ಮೈದಾನದಲ್ಲಿ ಸಹೋದರತೆ,ಭಾತೃತ್ವ ಹಾಗೂ ಸಮಾನತೆಯ ಸಂಕೇತವಾದ ಪವಿತ್ರ ರಂಜಾನ್ ತಿಂಗಳ ಈದ್ ಉಲ್ ಫಿತರ್ ಅಂಗವಾಗಿ ಸಾಮೂಹಿಕ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರ ಮೂಲಕ ಕಳೆದ ೩೦ ದಿನಗಳ ಉಪವಾಸವನ್ನು ಅಂತ್ಯಗೊಳಿಸಿದರು.

ಜಾಮೀಯಾ ಮಸೀದಿಯಿಂದ ಒಟ್ಟಾಗಿ ಮೆರವಣಿಗೆಯಲ್ಲಿ ಎಲ್ಲರೂ ಪಾಲ್ಗೊಂಡು ಈದ್ಗಾ ಮೈದಾನದಲ್ಲಿ ಕೂಡಿಕೊಂಡರು.

ಭಾಗಶಃ ಮುಸ್ಲಿಂ ಬಾಂಧವರು ಶುಭ್ರ ಬಳಿ ಉಡುಗೆಯನ್ನು ತೊಟ್ಟು ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಜಾಮೀಯಾ ಹಾಗೂ ಇಕ್ರಾ ಮಸೀದಿಯ ಧರ್ಮಗುರು ರಿಜ್ವಾನ್ ಖಾಸಿಮಿ ಧಾರ್ಮಿಕ ಪ್ರವಚನ ನೀಡಿದರು.

ಬೇಲೂರು ತಾಲೂಕಿನ ಅರೇಹಳ್ಳಿಯ ಈದ್ಗಾ ಮೈದಾನದಲ್ಲಿ ರಂಜಾನ್ ತಿಂಗಳ ಈದ್ ಉಲ್ ಫಿತರ್ ಅಂಗವಾಗಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *