ಅರೇಹಳ್ಳಿ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಹಳ ಅದ್ಧೂರಿಯಾಗಿ ಮಾಡಬೇಕಾಗಿದ್ದ ಆಚರಣೆಯನ್ನು ಈ ಬಾರಿ ಸರಳವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಕಿಸಾನ್ ಖೇತ್ ರಾಜ್ಯ ಸಂಚಾಲಕ ಹೆಚ್.ಡಿ ತುಳಸಿದಾಸ್ ಹೇಳಿದರು.

ಬೇಲೂರು ತಾಲೂಕಿನ ಅರೇಹಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಆಯೋಜನೆ ಮಾಡಲಾಗಿದ್ದ ಡಾ.ಬಿ.ಆರ್ ಅಂಬೇಡ್ಕರ್‌ರವರ ೧೩೩ ನೇ ಜನ್ಮದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅರೇಹಳ್ಳಿಯ ನಾಗರಿಕ ಬಂಧುಗಳು ಇಂದು ಒಗ್ಗೂಡಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದೇವೆ. ಲೋಕ ಸಭಾ ಚುನಾವಣೆ ಮುಗಿದ ಮೇಲೆ ಮೇ ಅಥವಾ ಜೂನ್ ತಿಂಗಳಿನಲ್ಲಿ ಮತ್ತೊಮ್ಮೆ ಅದ್ಧೂರಿಯಾಗಿ ಜಯಂತ್ಯುತ್ಸವವನ್ನು ಮಾಡುತ್ತೇವೆ ಎಂದರು.

ವಕೀಲ ರಾಜು ಅರೇಹಳ್ಳಿ ಮಾತನಾಡಿ, ವಿಶ್ವ ಕಂಡ ಧೀಮಂತ ನಾಯಕನ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿರುವುದು ಸಂತೋಷ ತಂದಿದೆ. ಬಡ ಜನರ, ದೀನ ದಲಿತರ ಪರವಾಗಿ ಧ್ವನಿ ಎತ್ತಿ ಸಮಾನತೆ,ಸ್ವಾತಂತ್ರö್ಯ ನೀಡಲು ಹಗಲಿರುಳು ಬಾಬಾ ಸಾಹೇಬ್ ಅಂಬೇಡ್ಕರ್ ಶ್ರಮಿಸಿದ್ದಾರೆ ಎಂದರು.

ಈ ವೇಳೆ ಸೋಮಯ್ಯ, ನಿಂಗರಾಜು,ಮಲ್ಲಿಕ್, ದಿನೇಶ್ ಕೊಪ್ಪಲು, ಮಹೇಂದ್ರ,ಭದ್ರೇಶ್, ವಿರಾಜು, ರಾಜು, ಶಿವಸ್ವಾಮಿ,ದೇವರಾಜು, ಮಲ್ಲಿಕಾರ್ಜುನ್ ನಾರ್ವೆ, ಶಿವರಾಜು, ಕುಮಾರ್, ರುದ್ರೇಶ್,ಗಣೇಶ್, ಚಂದನ್,ಅಣ್ಣಪ್ಪ ಸೇರಿದಂತೆ ಹಲವರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *