ಸಕಲೇಶಪುರ : ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಬಾಚಿಹಳ್ಳಿ ಪ್ರತಾಪ್ ಗೌಡರ ನಾಯಕತ್ವವನ್ನು ಬೆಂಬಲಿಸಿ ಇಂದು ತಂಬಲಗೇರಿಯ ಅನೇಕ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.

ಪ್ರತಾಪ್ ಗೌಡರು ಇಂದು ತಂಬಲಗೇರಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ನಾಯಕತ್ವ ಮೆಚ್ಚಿ ತಂಬಲಗೇರಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗೋವಿಂದಗೌಡ. ರವೀಶ್ ರಾಜೇಗೌಡ. ಇಂದು. ಉದಯ, ಪುಟ್ಟಸ್ವಾಮಿ ಗೌಡ ಮಲ್ಲೇಶ್. ವಿರಾಜು. ಮುರುಳಿ. ಭರತ್.ಪೂರ್ಣೇಶ್ ರವರು ಜೆ. ಡಿ. ಎಸ್. ಹಾಗೂ ಬಿ. ಜೆ. ಪಿ. ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ತಂಬಲಗೇರಿ ಗ್ರಾಮಸ್ಥರು ಎಲ್ಲರೂ ಪ್ರತಾಪ್ ಗೌಡರನ್ನು ಬೆಂಬಲಿಸಲು ನಿರ್ಧಾರ ಮಾಡಿದ್ದು ಕಾಂಗ್ರೇಸ್ ಪಕ್ಷಕ್ಕೆ ನಮ್ಮ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಇದ್ದನು ಸ್ವಾಗತಿಸಿದ ಪ್ರತಾಪ್ ಗೌಡರು ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *