
ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಸಂಸ್ಕೃತಿ, ಆಹಾರ ಪದ್ಧತಿ, ಜೀವನಶೈಲಿ ಕೂಡ ಬದಲಾಗುತ್ತಿದೆ. ಹಿಂದಿನ ಜನರು ಕೈಯಿಂದ ಆಹಾರವನ್ನ ಸೇವಿಸುತ್ತಿದ್ದರು, ಈಗ ಅನೇಕ ಜನರು ಚಮಚಗಳನ್ನ ಬಳಸಲು ಪ್ರಾರಂಭಿಸಿದ್ದಾರೆ.ಆದ್ರೆ, ಚಮಚದ ಬದಲು ಕೈಯಿಂದ ತಿಂದರೆ ಎಷ್ಟು ಲಾಭ ಗೊತ್ತಾ.? ಅಂತಹ ಅಭ್ಯಾಸದಿಂದ ದೇಹವು ಅನೇಕ ಪ್ರಯೋಜನಗಳನ್ನ ಪಡೆಯುತ್ತದೆ.ಕೈಯಿಂದ ತಿನ್ನುವ ಬದಲು ಚಮಚದಲ್ಲಿ ಊಟ ಮಾಡಿದ್ರೆ, ನಮ್ಮ ಹಿರಿಯರು ಬೈಯುತ್ತಿದ್ದರು. ಊಟ ಮಾಡುವಾಗ ಚಮಚ ಬಳಸಬೇಡಿ ಅಂತಿದ್ರು. ಅದ್ಯಾಕೆ ಗೊತ್ತಾ.?ವಾಸ್ತವವಾಗಿ, ಕೈಯಿಂದ ತಿನ್ನುವುದನ್ನ ಭಾರತದ ಹಳೆಯ ಸಂಪ್ರದಾಯಗಳಾದ ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಆಯುರ್ವೇದ ತಜ್ಞರು ಕೈಯ ಐದು ಬೆರಳುಗಳು ಐದು ಅಂಶಗಳಿಗೆ ಸಮಾನವೆಂದು ನಂಬುತ್ತಾರೆ.ಹೆಬ್ಬೆರಳು ಬೆಂಕಿಯನ್ನ ಪ್ರತಿನಿಧಿಸಿದ್ರೆ, ಉಂಗುರದ ಬೆರಳು ಭೂಮಿಯನ್ನ ಪ್ರತಿನಿಧಿಸುತ್ತದೆ. ಇನ್ನು ಮಧ್ಯದ ಬೆರಳು ಆಕಾಶವನ್ನ ಪ್ರತಿನಿಧಿಸಿದ್ರೆ, ತೋರುಬೆರಳು ಗಾಳಿಯನ್ನ ಪ್ರತಿನಿಧಿಸುತ್ತದೆ ಮತ್ತು ಕಿರುಬೆರಳು ನೀರನ್ನ ಪ್ರತಿನಿಧಿಸುತ್ತದೆ.ಇನ್ನು ಕೈಯಿಂದ ಆಹಾರ ಸೇವಿಸಿದಾಗ ಎಷ್ಟು ಆಹಾರ ಸೇವಿಸಬೇಕು ಅನ್ನೋ ಅರಿವು ಬರುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ನಾವು ಅತಿಯಾಗಿ ತಿನ್ನುವುದನ್ನ ನಿಲ್ಲಿಸುತ್ತೇವೆ ಮತ್ತು ಮಿತವಾಗಿ ತಿನ್ನುತ್ತೇವೆ.ಚಮಚದಿಂದ ತಿಂದರೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುತ್ತೇವೆ. ಇದರಿಂದ ನಮ್ಮ ಆರೋಗ್ಯ ಹದಗೆಡಲಾರಂಭಿಸುತ್ತದೆ. ಯಾಕಂದ್ರೆ, ಚಮಚವು ಹಸಿವಿನ ಸರಿಯಾದ ಕಲ್ಪನೆಯನ್ನ ನೀಡುವುದಿಲ್ಲ, ಆದರೆ ಕೈಯಿಂದ ತಿನ್ನುವಾಗ, ಆಹಾರದ ಸರಿಯಾದ ಪ್ರಮಾಣವು ನಿಮಗೆ ತಿಳಿಯುತ್ತದೆ.ಕೈಯಿಂದ ತಿನ್ನುವುದರಿಂದ ಬೆರಳುಗಳಿಗೆ ವ್ಯಾಯಾಮ ಸಿಗುತ್ತದೆ, ಇದು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೈಯಿಂದ ತಿಂದ ಆಹಾರ ಬೇಗ ಜೀರ್ಣವಾಗುತ್ತದೆ ಎಂದೂ ಕೆಲವರು ಹೇಳುತ್ತಾರೆ.
