
ದಿನೇ ದಿನೇ ಅಕ್ರಮವಾಗಿ ಗೋಸಾಗಾಟ,ಗೋಮಾಂಸ ಸಾಗಾಟ ಮಾಡುತ್ತಿರುವ ವ್ಯವಸ್ಥಿತ ಜಾಲ ಹೆಚ್ಚಾಗುತ್ತಿದೆ ಬಜರಂಗದಳ ಸಕಲೇಶಪುರ.ಇಂದು ಸಂಜೆ 6 ಗಂಟೆ ಸುಮಾರಿಗೆ ಹಾನುಬಾಳು ಭಾಗದಿಂದ ನೀಲಿ ಬಣ್ಣದ ಟಾರ್ಪಲ್ ಹಾಕಿ ಭದ್ರವಾಗಿ ಮುಚ್ಚಿದ ಅಶೋಕ ಬಂದ ಲೈಲ್ಯಾಂಡ್ KA 13 D 1157 ವಾಹನವೊಂದು ಸಕಲೇಶಪುರ ನಗರದ ಕಡೆ ಬಂದಿದ್ದು ಅನುಮಾನ ಬಂದು ಬಜರಂಗದಳ ಕಾರ್ಯಕರ್ತರು ಕ್ಯಾಮನಹಳ್ಳಿ ಭಾಗದಲ್ಲಿ ವಾಹನವನ್ನು ಅಡ್ಡಗಟ್ಟಿದ್ದು ಅಲ್ಲಿ ನಿಲ್ಲಿಸದೆ ಅತಿವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಚಾಲಕ ಬಂದಿದ್ದು ಅಂತಿಮವಾಗಿ ಕಾರ್ಯವೃತ್ತರಾದ ಬಜರಂಗದಳ ಕಾರ್ಯಕರ್ತರು ಹೆಬ್ಬಸಾಲೆ ಹಾಗೂ ಸಕಲೇಶಪುರ ತಾಲ್ಲೂಕಿನ ಕಾರ್ಯಕರ್ತರಿಗೆ ಮಾಹಿತಿ ನೀಡಿ ವಾಹನವನ್ನು ಹಿಂಬಾಲಿಸಿಕೊಂಡು ಬಂದು ಹೆಬ್ಬಸಾಲೆ ಪಂಚಾಯತ್ ವ್ಯಾಪ್ತಿಯ ಬಳಿ ಬಂದು ವಾಹನವನ್ನು ಅಡ್ಡಗಟ್ಟಿದ್ದು. ಚಾಲಕನನ್ನು ಪ್ರಶ್ನಿಸಿದಾಗ ಅನುಮಾನಾಸ್ಪದವಾಗಿ ಮಾತನಾಡಿದ್ದು ಒಂದು ಭಾಗದಲ್ಲಿ ಟಾರ್ಪಲ್ ಬಿಚ್ಚಿ ನೋಡಿದಾಗ ವಾಹನದೊಳಗೆ 5 ಮಲೆನಾಡು ಗಿಡ್ಡ ತಳಿಯ ಹಸುಗಳು ಕ್ರೂರವಾಗಿ ಕಟ್ಟಿರುವುದು ಕಂಡು ಬಂದಿದೆ. ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿ ವಾಹನವನ್ನು ಚಾಲಕ ಸಮೇತ ಪೋಲಿಸ್ ಸುಪರ್ದಿಗೆ ನೀಡಲಾಗಿದೆ. ಸಕಲೇಶಪುರ ನಗರ ಠಾಣೆಯಲ್ಲಿ ಗೋ ಹತ್ಯೆ ಪ್ರತಿಬಂಧಕ 2021 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಎಂದು ಸಕಲೇಶಪುರ ತಾಲ್ಲೂಕಿನ ಬಜರಂಗದಳದ ತಾಲ್ಲೂಕು ಸಹ ಸಂಯೋಜಕರಾದ ಶಿವು ಜಿಪ್ಪಿ ತಿಳಿಸಿದ್ದಾರೆ.





