
ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಕಸ ವಿಲೇವಾರಿ ಘಟಕದ ಸಮಸ್ಯೆ ನೆನೆಗುದಿಗೆಗೆ ಬಿದಿತ್ತು , ಆದರೆ ಇಂದು ಮಳಲಿಯ ಕಸ ವಿಲೇವಾರಿ ಘಟಕದ ಕಾಮಗಾರಿಯನ್ನು ವಿರೋಧಿಸಿ ಇಂದು ಮಳಲಿ ರಾಮನಹಳ್ಳಿಯ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು.ಪ್ರತಿಭಟನಾಕಾರರು ಪುರಸಭೆಯಿಂದ ಬಂದಿದ್ದ ಜೆಸಿಬಿ ಗಳನ್ನು ತಡೆದು ಕೆಲಸ ಮಾಡದಂತೆ ಪ್ರತಿಭಟನೆ ಮಾಡುತ್ತಿದ್ದರು ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ನಿರಂತ ಗ್ರಾಮಸ್ಥರನ್ನು ಬಂಧಿಸಿ ಕಸ ವಿಲೇವಾರಿ ಘಟಕದ ಕಾಮಗಾರಿಗೆ ಅನುವು ಮಾಡಿಕೊಟ್ಟರು. ಸ್ಥಳದಲ್ಲಿ ಉಪವಿಭಾಗದಿಕಾರಿ ಅನ್ಮೋಲ್ ಜೈನ್ ಎಎಸ್‌ಪಿ ಮಿಥುನ್ ,ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ, ಮತ್ತು ಇನ್ನು ಅನೇಕ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಮು ಹೂಡಿದ್ದಾರೆ.





