ಮಾವಿನಹಳ್ಳಿ ಗ್ರಾಮದಲ್ಲಿ ಗೋ ಹಂತಕರಿಂದ ಗೋವಿನ ಹತ್ಯೆ.. ಸಕಲೇಶಪುರ ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದ ಪೂರ್ಣೇಶ ಎಂಬುವವರ ಹಸು ಗದ್ದೆಯಲ್ಲಿ ಮೇಯುತ್ತಿದ್ದಾಗ ಗೋವಿನ ಕುತ್ತಿಗೆ ಕುಯ್ದು ಗೋ ಹಂತಕರು, ಅದನ್ನು ನೋಡಿದ ಅಲ್ಲಿನ ಸ್ಥಳೀಯರು ಕೂಗಾಡಿದ ತಕ್ಷಣ ಹೆದರಿದ ಗೋ ಹಂತಕರು ಹಸುವನ್ನು ಹೇಮಾವತಿ ನದಿಗೆ ತಳ್ಳಿ ಓಡಿ ಹೋಗಿದ್ದಾರೆ.ಹಸುವನ್ನು ಗ್ರಾಮಸ್ಥರುಗಳು ಸೇರಿ ಹೇಮಾವತಿ ನದಿಯಿಂದ ಮೇಲಕ್ಕೆ ತಂದು ಪೋಲಿಸರಿಗೆ ಸುದ್ದಿ ಮುಟ್ಟಿಸಿದ್ದಾರೆ.ತಕ್ಷಣ ಸ್ಥಳಕ್ಕೆ ಬೇಟಿ ನೀಡಿದ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಬಸವರಾಜು ಸ್ಥಳಕ್ಕೆ ಬೇಟಿ ಮಾಡಿ ಹಸುವಿನ ಮರಣೋತ್ತರ ಪರೀಕ್ಷೆ ನಂತರಮಾವಿನಹಳ್ಳಿ ಮಸ್ತಾರೆಯ ಗೋ ಹಂತಕ ಜಯರಾಜನನ್ನು ಬಂಧಿಸಿ ಇನ್ನಿಬ್ಬರು ಧರ್ಮ ಹಾಗೂ ಪ್ರಸನ್ನ ನನ್ನು ಹುಡುಕುತ್ತಿದ್ದಾರೆ.ಈ ಸಮಯದಲ್ಲಿ ಗ್ರಾಮಸ್ಥರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *