ಸಕಲೇಶಪುರ ತಾಲೂಕಿನ ಮಳಲಿ ಪಂಚಾಯಿತಿ ವ್ಯಾಪ್ತಿಯ ಮಳಲಿ ಗ್ರಾಮದಲ್ಲಿ ಕಸವಿಲೇವಾರಿ ಘಟಕ ಸ್ಥಾಪನೆ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ದಿನಾಂಕ 08/06/2023 ರಂದು ಗುರುವಾರ ಘಟಕ ನಿರ್ಮಿಸಿರುವ ಸ್ಥಳದಲ್ಲಿ ಗ್ರಾಮಸ್ಥರು ಶಾಂತಿಯುತವಾಗಿ ಪ್ರತಿಭಟನೆ ಮಾಡುವಾಗ ಪೊಲೀಸ್ ಇಲಾಖೆಯವರು ಊರಿನ ಸುಮಾರು 30 ಜನರನ್ನು ಅರೆಸ್ಟ್ ಮಾಡಿದ್ದು. ಮತ್ತು ಡಾ. ಬಿ. ಆರ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಿರುತ್ತಾರೆ ಎಂದು ಆರೋಪಿಸಿ ಸಕಲೇಶಪುರ-ಆಲೂರು-ಕಟ್ಟಾಯ ಕ್ಷೇತ್ರದ ಶಾಸಕರು ಸಿಮೆಂಟ್ ಮಂಜುನಾಥ್ ಮತ್ತು ಸಕಲೇಶಪುರದ ಉಪ ವಿಭಾಗಧಿಕಾರಿ,ಪೊಲೀಸ್ ಅಧಿಕಾರಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿ ಮತ್ತು ಇಂಜಿನಿಯರ್ ಇವರುಗಳು ದಲಿತರ ಮೇಲೆ ದೌರ್ಜನ್ಯ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಈ ಹಿಂದೆ ಬಿಫೋರ್ ಜೋನ್ ಗೆ ಬರುತ್ತಿದೆ ಎಂದು ಹೇಳಿ ಈಗ ಬರುವುದಿಲ್ಲ ಎಂದು ಇವರ ಇಷ್ಟಕ್ಕೆ ಬಂದಂತೆ ಕಾನೂನು ಮಾಡಿಕೊಂಡು ಗ್ರಾಮಸ್ಥರ ಮೇಲೆ ಗದಾಪ್ರಹಾರ ಮಾಡುತ್ತಿದ್ದರೆ ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ದಲಿತ ಸಂಘಟನೆಗಳ ಒಕೂಟ, ಹಾಗೂ ಸಮುದಾಯದ ಮುಖಂಡರು ಹಾಗೂ ಪ್ರಗತಿಪರ ಸಂಘಟನೆಗಳು ಇಂದು ಪ್ರತಿಭಟನೆ ಮಾಡಿ ಹೇಮಾವತಿ ಸೇತುವೆ ಬಳಿಯಿಂದ ತಾಲೂಕು ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳಿಗೆ ದಿಕ್ಕಾರ ಕೂಗುವ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಪ್ರತಭಟನೆ ಮೆರವಣಿಗೆ ನಡೆಸಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *