ಸಕಲೇಶಪುರ: ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೋಬಳಿಯ ವಿದ್ಯಾ ನಿಧಿ ಶಾಲೆಯಲ್ಲಿ ಜ್ಞಾನ ದೇವತೆ ಸರಸ್ವತಿಯ ಆಶೀರ್ವಾದ ಪಡೆದು ಹಿಂದೂ ಸಂಸ್ಕೃತಿಯ ಪ್ರಕಾರ ಹಿಂದಿನ ಕಾಲದಲ್ಲಿ ಗುರುಕುಲದ ಮಕ್ಕಳಿಗೆ ಹೇಗೆ ಶಿಕ್ಷಣ ಭೋದಿಸುತ್ತಿದ್ದರು ಅದೇ ರೀತಿ ಮಕ್ಕಳಿಗೆ ಅಕ್ಷರಾಭ್ಯಾಸ ಶುರುಮಾಡುವ ಮೊದಲು ಮಕ್ಕಳಿಗೆ ಶಾರದಾಂಬೆಗೆ ಪೂಜೆ ಸಲ್ಲಿಸಿ ಅಕ್ಕಿಯಲ್ಲಿ ಅಕ್ಷರಗಳನ್ನು ಬರೆಯುವ ಮೂಲಕ ಹಿಂದೂ ಪದ್ಧತಿಯ ಪ್ರಕಾರ ಇಂದು ಪೋಷಕರ ಸಮಕ್ಷಮದಲ್ಲಿ ಮಕ್ಕಳ ಜೊತೆ ಪದ್ಧತಿಯನ್ನು ಪ್ರತಿಪಾದಿಸಿಕಾರ್ಯಕ್ರಮವನ್ನು ಇಂದು ಯಶಸ್ವಿಯಾಗಿ ನೆರವೇರಿಸಲಾಯಿತು.ಸಕಲೇಶಪುರ ಪಂಚಮುಖಿ ದೇವಸ್ಥಾನದ ಅರ್ಚಕರಾದ ಶ್ರೀ ರಾಮಕೃಷ್ಣ ಭಟ್ಟರು ಅಕ್ಷರಾಭ್ಯಾಸದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಕೊಟ್ಟರು.ಈ ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್ (ರಿ)ನ ಅಧ್ಯಕ್ಷರಾದ ಶ್ರೀ ಬಸವರಾಜ ಎಚ್ ಪಿ, ಕಾರ್ಯದರ್ಶಿಗಳಾದ ಶ್ರೀ ಲಿಂಗ ದೇವರು, ಖಜಾಂಚಿಗಳಾದ ಹರೀಶ್ ಕಾಡುಮಕ್ಕಿ, ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ರಶ್ಮಿ, ಶಿಕ್ಷಕರು ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *