
ಕುಶಾಲನಗರದಲ್ಲಿ ಪೌರ ಕಾರ್ಮಿಕರಿಗೆ ನಿರ್ಮಾಣ ವಾಗುತ್ತಿರುವ ವಸತಿ ಗೃಹಗಳನ್ನು ವೀಕ್ಷಣೆ ಮಾಡಿದ ಶಾಸಕರು. ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ 8 ನೇ ವಾರ್ಡಿನ ಆದಿ ದ್ರಾವಿಡ ಪೌರಕಾರ್ಮಿಕರ ಸಂಘದಿಂದ ನೂತನ ಶಾಸಕರಿಗೆ ಸನ್ಮಾನಿಸಿದರು . ನಂತರ ಪೌರಕಾರ್ಮಿಕರಿಗಾಗಿ ಕುಶಾಲನಗರದಲ್ಲಿ ನಿರ್ಮಿಸುತ್ತಿರುವ ವಸತಿಗೃಹಗಳನ್ನು ವೀಕ್ಷಣೆ ಮಾಡಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ವರಲಕ್ಷ್ಮಿ ಹಾಗೂ ಪೌರ ಕಾರ್ಮಿಕರು ಇದ್ದರು.




