
ಸಕಲೇಶಪುರ : ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಕೂಡ ಇಲ್ಲೊಂದು ಕಡು ಬಡತನದಲ್ಲಿರುವ ತಾಲೂಕಿನ ಹಾನುಬಾಳು ಹೋಬಳಿಯ ನಡಹಳ್ಳಿ ಗ್ರಾಮದ ಮಲ್ಲಿಗಮ್ಮ ಕೋಂ ಮಂಜಯ್ಯ ಎಂಬ ಬಡ ಕುಟುಂಬ ದಿನನಿತ್ಯ ಕತ್ತಲೆಯಲ್ಲಿ ಕಳೆಯುವ ಸ್ಥಿತಿ ಉಂಟಾಗಿದೆ ಕಳೆದ 7 ವರ್ಷಗಳ ಹಿಂದೆ ಚೆಸ್ಕಾಂ ಇಲಾಖೆಯವರು ಇವರಿಗೆ ಸೇರಿದ ಆರ್.ಆರ್.ನಂ.3587 ರ ಮೀಟರ್ ವಶಪಡಿಸಿಕೊಂಡು ಇದೀಗ 7 ವರ್ಷಗಳ ನಂತರ ಅವರಿಗೆ ಸೇರಿದ ಮೀಟರ್ ಹಾಕಿಕೊಡುವಂತೆ ಚೆಸ್ಕಾಂ ಇಲಾಖೆಯವರಿಗೆ ಮನವಿ ಮಾಡಿಕೊಂಡಿದ್ದಾರೆ 18 ಸಾವಿರ ಕಟ್ಟಿದರೆ ನಿಮಗೆ ಮೀಟರ್ ಹಾಕಿಕೊಡುವುದಾಗಿ ಚೆಸ್ಕಾಂ ಇಲಾಖೆಯವರು ಹೇಳುತ್ತಾರೆ ,ನಾವು ಬಡವರಾಗಿರುವ ಹಾಗೂ ಕಾನೂನು ಗೊತ್ತಿಲ್ಲದೆ ಇರುವ ಕಾರಣ ಈ ರೀತಿಯಾಗಿ ಚೆಸ್ಕಾಂ ಇಲಾಖೆಯವರು ನಮಗೆ ಕರೆಂಟ್ ನೀಡುತ್ತಿಲ್ಲ ಶಾಸಕರು ಹಾಗೂ ಸಂಬಂಧಿಸಿದ ಮೇಲಾಧಿಕಾರಿಗಳು ನಮ್ಮ ಮನೆಗೆ ಕರೆಂಟ್ ಕೊಡಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು TV46 ಮಲೆನಾಡು ಚಾನಲ್ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಕುಟುಂಬದ ಮಂಜಯ್ಯ ಅವರು ಕೇಳಿಕೊಂಡಿದ್ದಾರೆ.
