
ಸಕಲೇಶಪುರ : ಶೈಕ್ಷಣಿಕ ಕ್ಷೇತ್ರದಲ್ಲಿ ಅನುದಾನರಹಿತ ಶಾಲೆಗಳ ಕೊಡುಗೆ ಅವಿಸ್ಮರಣೀಯ, ಅನುದಾನರಹಿತ ಶಾಲೆಗಳ ಸಂಕಷ್ಟದ ಅರಿವು ನನಗಿರುವುದರಿಂದ ಅವರ ಪರವಾದ ಧ್ವನಿಯಾಗಿರುತ್ತೇನೆ ಎಂದು ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಹೇಳಿದರು.ಅವರಿಂದು ಪಟ್ಟಣದ ರೋಟರಿ ಆಂಗ್ಲ ಶಾಲೆಯ ಸಭಾಂಗಣದಲ್ಲಿ ನಡೆದ ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.ಗುಣಮಟ್ಟದ ಶಿಕ್ಷಣ ಕಲ್ಪಿಸುವಲ್ಲಿ ಅನುದಾನರಹಿತ ಶಾಲೆಗಳು ಸರ್ಕಾರಿ ಶಾಲೆಗಳಿಗಿಂತ ಮುಂದಿವೆ ಎಂದು ಹೇಳಿದ ಅವರು ಕೊರೋನಾ ಸಂದರ್ಭದಲ್ಲಿ ತಮಗಿರುವ ಇತಿಮಿತಿಯ ಸಂಪನ್ಮೂಲ ಗಳನ್ನು ಬಳಸಿಕೊಂಡು ಶಾಲಾ ಶಿಕ್ಷಕರನ್ನು, ಸಿಬ್ಬಂದಿ ವರ್ಗದವರನ್ನು ಸಂತೈಸಿದರಲ್ಲದೆ, ವಿದ್ಯಾರ್ಥಿಗಳು ಪಾಠ ಪ್ರವಚನದಿಂದ ವಂಚಿತರಾಗದಂತೆ ಹೊಸರೀತಿಯ ಆನ್ ಲೈನ್ ಶಿಕ್ಷಣ ವ್ಯವಸ್ಥೆಯನ್ನು ಆರಂಭಿಸುವ ಮೂಲಕ ವಿಧ್ಯಾರ್ಥಿ ಗಳಿಗೆ ಸುಭಧ್ರವಾದ ಭವಿಷ್ಯವನ್ನು ನಿರ್ಮಾಣ ಮಾಡಿಕೊಟ್ಟ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಕಳೆದ 24 ವರ್ಷಗಳ ಶೈಕ್ಷಣಿಕ ಕ್ಷೇತ್ರದ ಸ್ಮರಣೀಯ ಸೇವೆಗಾಗಿ ದೆಹಲಿಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಯಾದ್ಗಾರ್ಸ್ ಆಕ್ಸ್ ಫರ್ಡ್ ಶಾಲೆಯ ಮುಖ್ಯಸ್ಥ ಪುರಸಭೆ ಮಾಜಿ ಅಧ್ಯಕ್ಷ ಇಬ್ರಾಹಿಂ ಯಾದ್ಗಾರ್ ರವರಿಗೆ ಅನುದಾನ ರಹಿತ ಶಾಲೆಗಳ ಒಕ್ಕೂಟ ದ ವತಿಯಿಂದ ಅಭಿನಂದಿಸಲಾಯಿತು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಇಬ್ರಾಹಿಂ ಯಾದ್ಗಾರ್ ನನ್ನ ಸಾಮಾಜಿಕ ಬೆಳವಣಿಗೆ ಯ ಹಿನ್ನೆಲೆಯಲ್ಲಿ ಹಲವಾರು ವ್ಯಕ್ತಿ ಗಳು ,ಸಂಘ ಸಂಸ್ಥೆಗಳ ಪ್ರೇರಣೆ ಇದೆ ಅದರಲ್ಲಿ ರೋಟರಿ ಶಾಲೆಯಿಂದ ದೊರೆತ ಪ್ರೇರಣೆಯಿಂದಲೇ ನಾನು ಗೆಳೆಯರೊಂದಿಗೆ ಸೇರಿಕೊಂಡು 24 ವರ್ಷಗಳ ಹಿಂದೇಯೇ ಆಕ್ಸ್ ಫರ್ಡ್ ಶಾಲೆ ಪ್ರಾರಂಭಿಸಲು ಸಾಧ್ಯವಾಯಿತು ಎಂದು ಹೇಳಿದ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ದೊರೆತ ಡಾಕ್ಟರೇಟ್ ಪ್ರಶಸ್ತಿ ಪಡೆದಿದಕ್ಕಾಗಿ ಶೈಕ್ಷಣಿಕ ಕ್ಷೇತ್ರದಿಂದೇ ಅಭಿನಂದನೆ ಸ್ವೀಕರಿಸುತ್ತಿರುವುದು ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದಷ್ಟೇ ಸಂತೋಷವಾಯಿತು ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಮಲ್ನಾಡ್ ಝಾಕೀರ್ ವಹಿಸಿದ್ದರು.ಮೊದಲಿಗೆ ರೋಟರಿ ಶಾಲೆಯ ಶಿಕ್ಷಕಿ ಪ್ರೇಮ ಪ್ರಾರ್ಥಿಸಿದರು, ಹಾನುಬಾಳು ವಿಧ್ಯಾನಿಧಿ ಶಾಲೆಯ ಲಿಂಗದೇವರು ಸ್ವಾಗತಿಸಿದರು,ರೋಟರಿ ಆಂಗ್ಲ ಶಾಲೆಯ ಸುರೇಶ್ ಅತಿಥಿಗಳ ಪರಿಚಯ ಮಾಡಿದರು,ಕೊನೆಯಲ್ಲಿ ಅನುದಾನರಹಿತ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಹಲಸುಲಿಗೆ ಟಸ್ಕೇರಿಯಾ ಶಾಲೆಯ ಗಿರೀಶ್ ವಂದಿಸಿದರು,ರೋಟರಿ ಆಂಗ್ಲ ಶಾಲೆಯ ಅಧ್ಯಕ್ಷ ಸುಬ್ರಹ್ಮಣ್ಯ, ಯಾದ್ಗಾರ್ಸ್ ಆಕ್ಸ್ ಫರ್ಡ್ ಶಾಲೆಯ ಝಾಕೀರ್ ಯಾದ್ಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


