ಆಲೂರು : ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯಲ್ಲಿ 1 ರಿಂದ 12 ನೇ ತರಗತಿ ಯವರೆಗೆ ಸುಮಾರು 750 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ 11 ಜನ ಉಪಾನ್ಯಾಸಕರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ ಕಲಾ-ವಿಭಾಗದಲ್ಲಿ ಕನ್ನಡ,ಸಮಾಜ ಶಾಸ್ತ್ರ,ರಾಜ್ಯಶಾಸ್ತ್ರ,ಇತಿಹಾಸ ತಲಾ ಒಬ್ಬರು ಉಪನ್ಯಾಸಕರ ಕೊರತೆ ಇದೆ ಇನ್ನೂ ವಾಣಿಜ್ಯ-ವಿಭಾಗ ಹಾಗೂ ವಿಜ್ಞಾನ ವಿಭಾಗದಲ್ಲಿ ವಾಣಿಜ್ಯಶಾಸ್ತ್ರ ಹಾಗೂ ಬೌತಶಾಸ್ತ್ರ ತಲಾ ಒಬ್ಬರಂತೆ ಒಟ್ಟು 7 ಉಪನ್ಯಾಸಕರ ಕೊರತೆ ಇದ್ದು ಇನ್ನೂ ಪ್ರೌಢಶಾಲೆಗೆ 5 ಜನ ಶಿಕ್ಷಕರು ಲ್ಯಾಬ್,ಲೈಬ್ರೆರಿ ಸೇರಿ 4 ಕೊಠಡಿ ಅವಶ್ಯಕತೆ ಇದೆ ಎಂದು ಕೆಪಿಎಸ್ ಪ್ರಾಂಶುಪಾಲ ಕುಮಾರಪ್ಪ ಉಪ ಪ್ರಾಂಶುಪಾಲ ಮಹಾದೇವು ಅವರು ಶಾಸಕರಿಗೆ ವಿವರಿಸಿದರು.ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ ಆಲೂರು ತಾಲ್ಲೂಕಿನ ರಾಯರಕೊಪ್ಪಲು ಗ್ರಾಮದಲ್ಲಿ ಕೆಪಿಎಸ್ ಇದ್ದು ಸುಮಾರು 750 ಕ್ಕೂ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಈ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಉಪನ್ಯಾಸಕರು ಶಿಕ್ಷಕರು ಹಾಗೂ ಸಿಬ್ಬಂದಿಗಳಿದ್ದು ಕರ್ನಾಟಕದಲ್ಲಿಯೇ ಎರಡನೇ ಮಾದರಿ ಶಾಲೆಯಾಗಿದೆ ಶಾಲೆಗೆ ಕೊಠಡಿ ಹಾಗೂ ಸಿಬ್ಬಂದಿಗಳ ಅವಶ್ಯಕತೆ ಇದೆ ತಕ್ಷಣವೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಮುಂದಾಗಿತ್ತೇನೆ ಇದರ ಜೊತೆಗೆ ಶಾಲೆಗೆ ಬೇಕಾಗುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಇನ್ನೂ ತಾಲ್ಲೂಕಿಗೆ ಮುಂದಿನ ದಿನಗಳಲ್ಲಿ ಎರಡ್ಮೂರು ಕೆಪಿಎಸ್ ಶಾಲೆಯ ಅವಶ್ಯಕತೆ ಇದೆ ಈ ಬಗ್ಗೆ ಸರ್ಕಾರದ ಮಂತ್ರಿಗಳ ಜೊತೆ ಮಾತನಾಡಿ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಲೆಯ ಉಪಾಧ್ಯಕ್ಷ ಚಂದ್ರಶೇಖರ್, ಶಾಲೆಯ ಪ್ರಾಂಶುಪಾಲ ಕುಮಾರಪ್ಪ,ಉಪ ಪ್ರಾಂಶುಪಾಲ ಮಹಾದೇವ್,ಎನ್.ಬಿ.ರಾಜಣ್ಣ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೂವಯ್ಯ ಸೇರಿ ಹಲವರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *