ಆಲೂರು ತಾಲ್ಲೂಕಿನ ಬೊಸ್ಮಾನಹಳ್ಳಿ ಗ್ರಾಮದಲ್ಲಿ ಡಾ. ಬಾಬ ಸಾಹೇಬ ಅಂಬೇಡ್ಕರ್ ಪ್ರತಿಮೆ ಅನಾವರಣ ನೆರವೇರಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು ರವರು ಶಿಕ್ಷಣದ ಮೂಲಕ ಸಂಘಟನೆಯೊಂದಿಗೆ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬಹುದೆಂಬುದು ಅಂಬೇಡ್ಕರ್ ತತ್ವವಾಗಿತ್ತುಪ್ರತಿಯೊಬ್ಬರೂ ಅಂಬೇಡ್ಕರ್ ಅವರ ತತ್ವ,ಸಿದ್ಧಾಂತಗಳನ್ನು ಪಾಲನೆ ಮಾಡಬೇಕಿದೆ ಎಂದ ಅವರು ಎಲ್ಲ ಜಾತಿ, ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ನೋಡಬೇಕೆಂಬುದು ಅಂಬೇಡ್ಕರ್ ಆಶಯವಾಗಿತ್ತು. ಸಮುದಾಯದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದರೆ, ಸಂಘಟನೆ ಅತಿಮುಖ್ಯ. ಅಂಬೇಡ್ಕರ್ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಸೂತ್ರಗಳಿಗೆ ಹೆಚ್ಚು ಒತ್ತು ನೀಡಿದ್ದರು ಅಂಬೇಡ್ಕರ್ ಸಂವಿಧಾನ ರಚನೆಗೂ ಮುನ್ನ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನ ಹೇಗಿರುತ್ತದೆ ಎಂಬುದನ್ನು ಸ್ವತಃ ತಾವೇ ಅನುಭವಿಸಿ ಕಾನೂನು ರೂಪಿಸಿದವರು. ದಮನಿತ ವರ್ಗಗಳ ಹಕ್ಕುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಂಬೇಡ್ಕರ್ ಪಾತ್ರ ಹಿರಿದಾಗಿದ್ದು,ಪ್ರತಿಯೊಬ್ಬರೂ ಅಂಬೇಡ್ಕರ್ ಆಶಯಗಳಿಗೆ ತಕ್ಕಂತೆ ಕಾರ್ಯಪ್ರವೃತ್ತರಾಗುವ ಅಗತ್ಯವಿದೆ ಗ್ರಾಮೀಣ ಭಾಗದಲ್ಲಿಯೂ ಪ್ರತಿಮೆ ಅನಾವರಣ ಮಾಡುತ್ತಿರುವುದು ಇದೊಂದು ಒಳ್ಳೆಯ ಬೆಳವಣಿಗೆ ಇದು ಎಲ್ಲಾ ಗ್ರಾಮ ಕೇರಿಗಳಲ್ಲಿ ಎಲ್ಲಾ ಸಮುದಾಯ ಸೇರಿ ಇಂತಹ ಒಳ್ಳೆಯ ಕಾರ್ಯಗಳಿಗೆ ಕೈಜೋಡಿಸಬೇಕು ಆಗ ಮಾತ್ರ ಎಲ್ಲರೂ ಸಹಬಾಳ್ವೆಯಿಂದ ಬದಕಲು ಸಾದ್ಯ ಗ್ರಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.ಮಾಜಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿ, ಬಸವಣ್ಣ ಅಂಬೇಡ್ಕರ್ ಮೊದಲಾದವರು ಜಾತ್ಯಾತೀತ ಮೌಲ್ಯಗಳ ಪ್ರತಿಪಾದಕರು. ಇವರನ್ನು ಒಂದು ಜಾತಿ, ಮತ- ಧರ್ಮಕ್ಕೆ ಸೀಮಿಗೊಳಿಸುವುದು ತರವಲ್ಲ ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯ ಬದುಕು ಸಾಗಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿದ್ದಾರೆ. ಅವರು ಯಾವುದೇ ಒಂದು ಸಮುದಾಯಕ್ಕೆ ಸಂವಿಧಾನ ರಚನೆ ಮಾಡಿಲ್ಲ.ಎಲ್ಲಾ ಸಮುದಾಯದವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮೀಸಲಾತಿಯಲ್ಲಿ ಅನುಕೂಲ ಕಲ್ಪಿಸುವಂತೆ ರಚನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಗ್ರಾಮದ ಶಿಕ್ಷಕ ಚನ್ನವೀರಯ್ಯ ಅವರ ಪುತ್ರಿ ಪಂಚಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ,ಕನ್ನಡ ಪ್ರಾದ್ಯಾಪಕ ಡಿ.ಕೆ.ಮಂಜಯ್ಯ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೂವಯ್ಯ,ಡಿಎಸ್ ಎಸ್ ಮುಖಂಡ ಬಸವರಾಜ್,ರಂಗಯ್ಯ,ದೇವರಾಜು,ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪುರುಷೋತ್ತಮ,ಬೊಸ್ಮಾನಹಳ್ಳಿ ಗ್ರಾಮದ ಮುಖಂಡ ಚಂದ್ರು,ಬಿ.ಸಿ.ರಾಮಯ್ಯ,ಎಂ.ಬಿ.ರಾಜಣ್ಣ,ಶಿಕ್ಷಕರಾದ ಚನ್ನವೀರಯ್ಯ,ಸಂಘದ ಕಾರ್ಯದರ್ಶಿ ಶಿವರಾಜು,ಉಪಾಧ್ಯಕ್ಷ ಲೋಕೇಶ್,ಲಕ್ಷ್ಮಣ,ಹಾಗೂ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *