ಸಕಲೇಶಪುರ : ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳಲ್ಲಿ ಮನುಷ್ಯರು ಹಾಗೂ ಮನೆಗಳ ಮೇಲೆ ದಾಳಿ ಮಾಡುತ್ತಿದ್ದ ‘ಮಕ್ನಾ’ ಕಾಡಾನೆಯನ್ನು ಹಿಡಿದು ಸ್ಥಳಾಂತರ ಮಾಡಿದ ಬೆನ್ನಲ್ಲೇ, ಕೊಡಗಿನಿಂದ ಇಂಥದ್ದೇ ಪುಂಡಾನೆ ‘ಸ್ಟಾಲಿನ್‌’ ತಾಲ್ಲೂಕಿಗೆ ಪ್ರವೇಶಿದಿ ಜನರಲ್ಲಿ ಜೀವ ಭಯ ಹುಟ್ಟಿಸಿದೆ.ಮಕ್ನಾ ಕಾಡಾನೆ ಸ್ಥಳಾಂತರ ಮಾಡಿದ್ದರಿಂದ ನಿಟ್ಟುಸಿರುವ ಬಿಟ್ಟು ತಿರುಗಿ ನೋಡುವುದರೊಳಗೆ ಮಠಸಾಗರ ಹಾಗೂ ಕೊಲ್ಲಹಳ್ಳಿ ಗ್ರಾಮದಲ್ಲಿ ಬುಧವಾರ ಹಾಗೂ ಗುರುವಾರ ‘ಸ್ಟಾಲಿನ್‌’ ಬಂದಿದೆ. ‘ ಆಕ್ರಮಣಕಾರಿ ಕಾಡಾನೆ’ (ಅಟ್ಯಾಕಿಂಗ್‌ ಎಲಿಫೆಂಟ್‌’ ಎಂದೇ ಕೊಡಗಿನಲ್ಲಿ ಇದು ಹೆಸರು ಮಾಡಿದೆ.ಆನೆ ಒಂಟಿಯಾಗಿ ಕಾಫಿ ತೋಟಗಳಲ್ಲಿ ಅಡ್ಡಾಡುತ್ತಿದ್ದು, ಬಾಳೆ, ಅಡಿಕೆ, ಕಾಫಿ ಗಿಡಗಳನ್ನು ತುಳಿದು ನಾಶ ಮಾಡುತ್ತಿದೆ. ಸ್ಟಾಲಿನ್‌ ತಾಲ್ಲೂಕಿಗೆ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಎಸಿಎಫ್‌ ಸುರೇಶ್‌, ವಲಯ ಅರಣ್ಯ ಇಲಾಖೆ ಆರ್‌ಎಫ್‌ಒ ಶಿಲ್ಪಾ ಹಾಗೂ ಸಿಬ್ಬಂದಿ ಮಠಸಾಗರ ಗ್ರಾಮಕ್ಕೆ ತೆರಳಿ ಆನೆಯನ್ನು ಪತ್ತೆ ಹಚ್ಚಿದ್ದಾರೆ. ಜನರು ಅತಂಕಗೊಂಡಿದ್ದಾರೆ. ದಾಳಿ ಮಾಡುವ ಮೊದಲು ಸ್ಥಳಾಂತರ ಮಾಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ.’ಸ್ಟಾಲಿನ್‌ ಕಾಡಾನೆ ಕೊಲ್ಲಹಳ್ಳಿ ಮಠಸಾಗರ, ಅಕ್ಕ ಪಕ್ಕದ ಹಲಸುಲಿಗೆ, ಕಾಟಳ್ಳಿ, ಮಾಸವಳ್ಳಿ, ಹಾಲೇಬೇಲೂರು, ಮಳಲಿ ಸುತ್ತಲಿನ ಗ್ರಾಮಗಳಲ್ಲಿ ಸಂಚರಿಸುತ್ತಿದೆ. ಆನೆಯನ್ನು ಕಂಡರೆ ಕೂಡಲೇ ಅರಣ್ಯ ಇಲಾಖೆ ಸಹಾಯವಾಣಿಗೆ ಕರೆ ಮಾಡಿ. ಇಲ್ಲವೆ ಆರ್‌ಆರ್‌ಟಿ ಸಿಬ್ಬಂದಿ ಗಮನಕ್ಕೆ ತನ್ನಿ. ಈ ಆನೆಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಕ್ಷಿಪ್ರ ಪಡೆ ಯೋಧರನ್ನು ನಿಯೋಜಿಸಲಾಗಿದೆ.ಎಂದು ವಲಯ ಅರಣ್ಯ ಅಧಿಕಾರಿ ಶಿಲ್ಪಾ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *