ಸಕಲೇಶಪುರ: ತಾಲೂಕಿನ ಹೆತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ಸಂಘದ ಸಂಸತ್ತಿನ ನಾಯಕರುಗಳನ್ನು ಮತದಾನ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು ಹಾಗೆ ಇಂದು ಸಂಸತ್ತಿನ‌ ಪ್ರಮಾಣವಚನ ಕಾರ್ಯಕ್ರಮವನ್ನು ಮಾಡಲಾಯಿತು .ಈ ಸಂಸತ್ತುಸಮಾರಂಭ:2023-24 ನೇ ಸಾಲಿನ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶಾಂತಿ ಎಂ. ಮಾತನಾಡಿ ಮಕ್ಕಳಿಗೆ ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಯಾವರೀತಿಯಲ್ಲಿ ನಾಯಕರನ್ನು ಚುನಾಯಿಸಿ ಕಳಿಸುತ್ತಾರೆ ಆಯ್ಕೆಯಾದ ಜನಪ್ರತಿನಿಧಿಗಳ ಪಾತ್ರ ಏನು ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಪ್ರಕಾರವಾಗಿ ಅವರಿಂದಲೇ ಅವರ ನಾಯಕರ ಆಯ್ಕೆ ಮಾಡುವ ವಿಧಾನ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ ಎಂಬ ಉದ್ದೇಶದಿಂದ ವಿದ್ಯಾರ್ಥಿ ಸಂಸತ್ತು ಆಯ್ಕೆ ಮಾಡಲಾಗುತ್ತಿದೆ ಎಂದರು.ಈ ವಿದ್ಯಾರ್ಥಿ ಸಂಸತ್ತಿಗೆ ಮುಖ್ಯಮಂತ್ರಿಯಾಗಿ 10 ನೇ ತರಗತಿ ವಿದ್ಯಾರ್ಥಿ ಸುಜನ್,ಉಪ ಮುಖ್ಯಮಂತ್ರಿಯಾಗಿ 10 ನೇ ತರಗತಿ ವಿದ್ಯಾರ್ಥಿ ಆದರ್ಶ ಗೃಹ ಸಚಿವರಾಗಿ ಅಶ್ವಿನ್ ವೈ.ಆರ್, ನಿಶ್ಚಿತ, ಆಹಾರ ಸಚಿವರಾಗಿ ಚೇತನ್ ಕುಮಾರ್, ತನ್ವಿಕ, ಆರೋಗ್ಯ ಮತ್ತು ಸ್ವಚ್ಚತಾ ಸಚಿವ ಪ್ರಣವ್ ಗೌಡ,ಬಿಂದು ಶ್ರೀ, ಕ್ರೀಡಾ ಮತ್ತು ಶಿಸ್ತು ಸಚಿವ ಸುಕೇತ್ ಪಿ.ವಿ.ಸಾನಿಕಾ ಶೆಟ್ಟಿ. ಗ್ರಂಥಾಲಯ ಸಚಿವ ವೀಕ್ಷಿತ ಹೆಚ್.ಪಿ.ಹಿತ ಶ್ರೀ ಜೆ.ಡಿ., ತೋಟಗಾರಿಕೆ ಮತಗತು ನೀರಾವರಿ ಸಚಿವ ಧನಿತ್ ಹೆಚ್.ಎಂ.ಪ್ರೇಕ್ಷಿತ್ ಹೆಚ್.ಐ.,ಶಿಕ್ಷಣ ಸಚಿವ ಹರ್ಷಿತ್ ಹೆಚ್.ಕೆ. ಲಕ್ಷ್ಮಿ ಹೆಚ್.ಎಂ.,ಸಾಂಸ್ಕೃತಿಕ ಸಚಿವ ವರ್ದನ್ ಗೌಡ, ಮೌಲ್ಯ. ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಈಶ್ವರ್ ಪ್ರಸಾದ್, ಕ್ಷಮಿತ, ಹಣಕಾಸು ಸಚಿವರಾಗಿ ಭುವನ್ ಗೌಡ ಮತ್ತು ಮೇಘನಾ ಆಯ್ಕೆಯಾದರು ಈ ಸಂದರ್ಭದಲ್ಲಿ ನಿಲಯ ಪಾಲಕರದ ಪುಟ್ಟಸ್ವಾಮಿ. ಹಾಗೂ ಶಿಕ್ಷಕರು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *