
ಸಕಲೇಶಪುರ.ಸಕಲೇಶಪುರ ತಾಲೂಕಿನ ಕೌಡಳ್ಳಿ ಗ್ರಾಮದಲ್ಲಿ ಗಣಪಯ್ಯ ಎಂಬ ಮಹಾನುಭಾವರ ಕೊಡುಗೆಯಿಂದ ತಲೆಯೆತ್ತಿರುವ ಗಣಪಯ್ಯ ಶ್ರವಣದೋಷವುಳ್ಳ ಮಕ್ಕಳ ಶಾಲೆ ಶಾಲೆಯ ಗುಣಮಟ್ಟ ಹೇಗೆ ಎಂದರೆ ಅಚ್ಚುಕಟ್ಟಾದ ಕಟ್ಟಡ ಸ್ವಚ್ಛತೆಯಿಂದ ಕೂಡಿದ ವಸತಿಗೃಹ ವಿಶಾಲವಾದ ಆಟದ ಮೈದಾನ ನಿಶಬ್ದತೆಯಿಂದ ಕೂಡಿದ ಸ್ಥಳ ಈ ಶಾಲೆಯನ್ನು ಒಂದು ಬಾರಿ ನೋಡಿದರೆ ಯಥವರ ಮನಸ್ಸಿನಲ್ಲಾದರೂ ಮತ್ತೊಮ್ಮೆ ನೋಡಲೇಬೇಕು ಮಗದೊಮ್ಮೆ ನೋಡಲೇಬೇಕು ಎಂದು ಅನಿಸುವುದು ಸಹಜ ಇಂಥ ಶಾಲೆಗೆ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳು ಆಗಮಿಸಿ ಮಕ್ಕಳಿಗೆ ಸರ್ಕಾರದಿಂದ ಬರುವ ಸೌಲಭ್ಯಗಳ ಬಗ್ಗೆ ಮಾಹಿತಿ ಕಲೆಹಾಕಿ ಮತ್ತು ಮಕ್ಕಳ ವಸತಿಗೃಹ ವೀಕ್ಷಣೆ ಮಾಡಿ ಆಹಾರದ ಗುಣಮಟ್ಟವನ್ನು ತಿಳಿಯುವುದಕ್ಕೆ ಮಧ್ಯಾಹ್ನದ ಊಟವನ್ನು ಅಲ್ಲೇ ನೆರವೇರಿಸಿದರು. ಶಾಲೆಗೆ ಮೂಲಭೂತ ಸೌಕರ್ಯಗಳ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದರು. ಈ ಶಾಲೆಯ ಬಗ್ಗೆ ನನಗೆ ಅಪಾರವಾದ ಪ್ರೀತಿ ಇದೆ ಯಾಕೆಂದರೆ ಇಲಿ ಇರುವುದು ಎಲ್ಲಾ ದೇವರ ಮಕ್ಕಳು ಶಾಲೆಯ ಶುಚಿತ್ವದ ಬಗ್ಗೆ ಎಷ್ಟು ಗುಣಗಾನ ಮಾಡಿದರು ಸಾಲದು ಶ್ರವಣದೋಷ ವುಳ್ಳ ಮಕ್ಕಳು ಎಲ್ಲರಂತಲ್ಲ ಅವರದೇ ಆದ ಒಂದು ಪ್ರಪಂಚ ಅವರಿಗೆ ಎಲ್ಲರಂತೆ ಮಾತು ಅರಿಯುವುದು ಕಷ್ಟ ಅವರ ಭಾಷೆಯಲ್ಲಿ ಮಾತಾಡುವುದು ಕೆಲವರಿಗೆ ಕಷ್ಟ ಎನಿಸಬಹುದು. ಆದರೆ ಅವರ ಸನ್ನೆ ಭಾಷೆ ವಿಭಿನ್ನವಾಗಿಯೂ ಮತ್ತು ಅರ್ಥಪೂರ್ಣ ವಿಶೇಷತೆ ಇರುತ್ತದೆ. ಇಂಥ ಮಕ್ಕಳೊಂದಿಗೆ ಮಕ್ಕಳಾಗಲು ಬಹಳ ಖುಷಿ ತರುತ್ತದೆ ಅವರಿಗೆ ವಿದ್ಯಾಭ್ಯಾಸ ಮಾಡುವುದು ಬಹಳ ಆನಂದ ಕೊಡುತ್ತದೆ. ಮಕ್ಕಳೊಂದಿಗೆ ಬೆರೆತ ನಿಷ್ಕಲ್ಮಶವಾದ ಹಾಸನ ಜಿಲ್ಲೆಗೆ ಸ್ಪೂರ್ತಿದಾಯಕವಾದ ಅಧಿಕಾರಿ ಎಂದರೆ ತಪ್ಪಾಗಲಾರದು ಅದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಅನುಪಮಾ ಅವರು ಕಚೇರಿಯಲ್ಲಿ ಕುಳಿತು ಕೇವಲ ಫೈಲ್ಗಳ ಮೂಲಕ ಮಾಹಿತಿ ತಿಳಿಯದೆ ಹಾಸನ ಜಿಲ್ಲೆಯ ಪ್ರತಿ ತಾಲೂಕು ಮತ್ತು ಗ್ರಾಮಗಳಿಗೆ ಗ್ರಾಮ ವಾಸ್ತವ್ಯ ನೀಡುತ್ತಿರುವ ಏಕೈಕ ಮಹಿಳಾ ಅಧಿಕಾರಿ ಯಾಗಿದ್ದಾರೆ.



