ಸಕಲೇಶಪುರ ತಾಲೂಕಿನ ತಾಲ್ಲೂಕು ಪಂಚಾಯಿತಿ ಹಾಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಸನ ರವರ ಸಹಯೋಗದಲ್ಲಿ ಯಸಳೂರು ಗ್ರಾಮ ಪಂಚಾಯಿತಿ ಶುಭೋದಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಹಾಗೂ ಉನ್ನತಿ ಯೋಜನೆಯ ಫಲಾನುಭವಿಗಳಿಗೆ ಸೆಣಬಿನ ಉತ್ಪನ್ನ ತಯಾರಿಕೆ ಜೂಟ್ ಬ್ಯಾಗ್ ತಯಾರಿಕೆ ಬಗ್ಗೆ 13 ದಿನಗಳ ಕಾಲ ತರಬೇತಿ ಕಾರ್ಯಗಾರದ ಉದ್ಘಾಟನೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಂಯೋಜಕರಾದ ಹರಿಪ್ರಸಾದ್, ಯೋಜನೆಯ ತಾಲ್ಲೂಕು ವ್ಯವಸ್ಥಾಪಕರಾದ ನಾಗೇಶ್ ಹೆಚ್ ಎಸ್, ವಲಯ ಮೇಲ್ವಿಚಾರಕರಾದ ರೇಣುಕಾ ಪ್ರಸಾದ್, ರತನ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವೀರಭದ್ರಪ್ಪ, ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿಗಳು ಪದಾಧಿಕಾರಿಗಳು, ಕೃಷಿ ಸಖಿ, ಪಶು ಸಖಿಗಳು ಸ್ವ ಸಹಾಯ ಗುಂಪಿನ ಸದಸ್ಯರುಗಳು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *