
. ಸಕಲೇಶಪುರ ತಾಲೂಕಿನ ಹಾನು ಬಾಳು ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಸರಕಾರಿ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಜನರ ಸಮಸ್ಯೆಗಳ ಕಡತವನ್ನು ಈ ತಿಂಗಳ ಒಳಗಾಗಿ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.ಕಂದಾಯ ಹಾಗೂ ಅರಣ್ಯ ಇಲಾಖೆಯಲ್ಲಿ ಜನರು ಹೆಚ್ಚಾಗಿ ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಬರುತ್ತಾರೆ. ಈ ಎರಡು ಇಲಾಖೆಗಳು ತೀರಾ ಅಗತ್ಯವಾಗಿರುವ ಇಲಾಖೆಗಳಾಗಿವೆ. ಹೀಗಾಗಿ ಈ ಇಲಾಖೆಗಳಲ್ಲಿ ಯಾವುದೇ ಕಡತಗಳನ್ನು ಉಳಿಸಿಕೊಳ್ಳಬಾರದು ಎಂದು ಅವರು ತಿಳಿಸಿದರು.ಕಂದಾಯ ಇಲಾಖೆಯ ಬಗ್ಗೆ ವಿಶೇಷ ಸಭೆ ಕರೆಯುವುದಾಗಿ ತಿಳಿಸಿದ ಅವರು ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ವಿಮಲ ರಾಜಯ್ಯ, ಉಪಾಧ್ಯಕ್ಷರಾದ ಸಂತೋಷ್ , ತಾ ಪಂ ಕಾರ್ಯ ನಿರ್ವಹಣೆ ಅಧಿಕಾರಿ ರಾಮಕೃಷ್ಣ .ಆರ್ ಸದಸ್ಯರಾದ ಶ್ರೀ ಕೇಶವಮೂರ್ತಿ, ಅಚ್ಚರಡಿ ಮೋಹನ್ ಕುಮಾರ್, ಗಿರೀಶ್, ಯೋಗರಾಜ್, ಸುರೇಶ್, ಮತ್ತು ಶ್ರೀಮತಿ ಹರಿಣಾಕ್ಷಿ, ಸಹಾಯಕ ನಿರ್ದೇಶಕರು ಮತ್ತು ಪಿಡಿಓ ಹರೀಶ್. ಕೆ ಕಾರ್ಯದರ್ಶಿ ವೀಣಾ ಸಿಬ್ಬಂದಿ ಮಾಜಿ ಹಾಲಿ ಸದಸ್ಯರು ಹಾಜರಿದ್ದರು
