
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹಾನುಬಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಇಲ್ಲಿನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ, ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು 2023 24ನೇ ಸಾಲಿನ, ತಾಲೂಕಿನ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಪ್ರಶಸ್ತಿ ಗಳಿಸಿದ ಶತಮಾನೋತ್ಸವ ಪೂರೈಸಿದ, ತಾಲೂಕಿನ ಏಕೈಕ ಶಾಲೆ ಇದಾಗಿದ್ದು ಈ ಹಿಂದೆ ಎಸ್ ಡಿ ಎಂ ಸಿ ಸಮಿತಿಯಲ್ಲಿ ಸೇವೆ ಮಾಡಿರುವ ಎಲ್ಲಾ ಪದಾಧಿಕಾರಿಗಳು ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅನುಭವಿ ಕ್ರಿಯಾಶೀಲ ಸಮಿತಿಗೆ, ಬೆಂಬಲವಾಗಿ ಶಾಲೆಯ ಅಭಿವೃದ್ಧಿಗೆ ಮಹತ್ತರ ಸೇವೆ ನೀಡುತ್ತಿರುವ ಹಿರಿಯ ವಿದ್ಯಾರ್ಥಿ ಸಂಘ, ಮತ್ತು ಶಾಲೆಯ ಎಲ್ಲಾ ರೀತಿಯ ಕಾರ್ಯಗಳಿಗೆ ಉದಾರವಾಗಿ ಆರ್ಥಿಕ ಸಹಾಯ ಮಾಡಿರುವ ದಾನಿಗಳ ಕೊಡುಗೆ ಶ್ಲಾಘನೀಯವಾಗಿದೆ ಜೊತೆಗೆ ಪಾರದರ್ಶಕ ಮತ್ತು ಸಮಾಜಮುಖಿ ಶಾಲೆಯ ಶ್ರೇಯೋಭಿವೃದ್ಧಿಗೆ ಉತ್ತಮ ಎಸ್ಡಿಎಂಸಿಯ ಸಮಿತಿ ರಚನೆ ಮಾಡಲು ಅವಕಾಶ ನೀಡಿದ ಪೋಷಕರಿಗೂ ಈ ಮೂಲಕ ಸಮಿತಿಯ ಪರವಾಗಿ ಶಾಲೆಯ ಮುಖ್ಯ ಶಿಕ್ಷಕರು ಧನ್ಯವಾದಗಳನ್ನು ಅರ್ಪಿಸಿರುತ್ತಾರೆ .
ಹಾಗೂ ಈ ಪ್ರಶಸ್ತಿ ದೊರಕಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲಾ ಶಿಕ್ಷಕರು, ಈ ಹಿಂದೆ ಕಾರ್ಯ ನಿರ್ವಹಿಸಿದ ಶಿಕ್ಷಕರು ಮತ್ತು ಇಲಾಖೆ ಎಲ್ಲಾ ಅಧಿಕಾರಿಗಳಿಗೆ ಅನಂತ ಧನ್ಯವಾದಗಳನ್ನು ಶಾಲಾ ಎಸ್.ಡಿ.ಎಂಸಿ ಆಡಳಿತ ಮಂಡಳಿ ಸಲ್ಲಿಸುತ್ತದೆ ಎಂದು ಎಸ್.ಡಿ.ಎಂ.ಸಿ.ಅದ್ಯಕ್ಷ ಅರುಣ್ ( ಅಣ್ಣು) ತಿಳಿಸಿದ್ದಾರೆ.




