
ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಪತ್ರಿಕಾ ದಿನಾಚರಣೆ ಅಂಗವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದಿಂದ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ನಗರದ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯ ಆರಂಭದಲ್ಲಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಟಿ.ವಿ.ಶಿವಾನಂದ ತಗಡೂರು, ವಿವಿಧ ಕಾರ್ಯಕ್ರಮ ಆಯೋಜನೆ ವಿಷಯದಲ್ಲಿ ಹಾಸನ ಜಿಲ್ಲಾ ಪತ್ರಕರ್ತರ ಸಂಘ, ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ಮಾನಸಿಕ ಆರೋಗ್ಯ ಎಷ್ಟು ಮುಖ್ಯವೋ ಅದೆ ರೀತಿ ದೈಹಿಕ ಆರೋಗ್ಯವೂ ಕೂಡ ಪ್ರಮುಖವಾಗಿದ್ದು, ವೃತ್ತಿಯ ಜೊತೆ ಜೊತೆಯಲ್ಲಿಯೇ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.ಪತ್ರಕರ್ತರಾದವರು ಯಾವಾಗಲೂ ಮಾನಸಿಕವಾಗಿ ಜಾಗೃತರಾಗಿ ಮತ್ತು ಒತ್ತಡದಲ್ಲಿರುತ್ತೇವೆ. ಆದರೆ ದೈಹಿಕವಾಗಿ ದೇಹ ದಂಡಿಸುವುದು ಬಹಳ ಕಡಿಮೆ. ಹೆಚ್ಚು ಸಮಯವನ್ನು ಒತ್ತಡದಲ್ಲೇ ಕಳೆಯಬೇಕಾಗಿದ್ದು, ಇದಕ್ಕೆ ಮಾನಸಿಕ ಆರೋಗ್ಯ ಜೊತೆಗೆ ದೈಹಿಕ ಆರೋಗ್ಯವೂ ಅತ್ಯಗತ್ಯ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎನ್.ಶಿವಸ್ವಾಮಿ ಮಾತನಾಡಿ, ಕಾರ್ಯ ಒತ್ತಡದ ನಡುವೆ ಪತ್ರಕರ್ತರು ಕ್ರೀಡಾಕೂಟ ಆಯೋಜನೆ ಮಾಡಿರುವುದು ನಿಜಕ್ಕೂ ಮಾದರಿ ನಡೆ, ಇದು ಹೆಚ್ಚು ಹೆಚ್ಚು ನಡೆಯಬೇಕು ಎಂದು ಸಲಹೆ ನೀಡಿದರು.ದಿನನಿತ್ಯ ಜಂಜಾಟ, ಒತ್ತಡದಲ್ಲೇ ಕೆಲಸ ಮಾಡುವ ಪತ್ರಕರ್ತರಿಗೆ ಉಲ್ಲಾಸ, ಮನರಂಜನೆ ಸಿಗುವುದು ಇಂತಹ ಕ್ರೀಡೆಗಳಿಂದ. ಹಾಗಾಗಿ ಇಂತಹ ಆಟೋಟಗಳನ್ನು ನಿರಂತರವಾಗಿ ಹಮ್ಮಿಕೊಂಡು ಆರೋಗ್ಯ ವೃದ್ಧಿಸಿಕೊಳ್ಳುವುದರ ಜೊತೆಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಆಗಲಿದೆ ಎಂದು ಹೇಳಿದರು.ಗೆಲುವು ಪಡೆದವರು:೩೦ ವರ್ಷದೊಳಗಿನ ಶಾಟ್ಪುಟ್: ಶರತ್ (ಪ್ರಜೋದಯ) ಪ್ರಥಮ, ಪರಮೇಶ್ ವಡೂರು (ಜನಮಿತ್ರ) ದ್ವಿತೀಯ, ಭರತ್ (ಸತ್ಯದ ಹೊನಲು) ತೃತೀಯ ಬಹುಮಾನ ಪಡೆದರು.೪೦ ವರ್ಷದೊಳಗೆ: ಪ್ರದೀಪ್ (ಫಾಸ್ಟ್ ನ್ಯೂಸ್) ಪ್ರಥಮ, ಲವ ಕುಮಾರ್ (ವಿಜಯ ಕರ್ನಾಟಕ) ದ್ವಿತೀಯ ಹಾಗೂ ಅಭಿ, ಹೊಳೆನರಸೀಪುರ (ಜ್ಞಾನದೀಪ) ತೃತೀಯ ಸ್ಥಾನ ಪಡೆದರು.೫೦ ವರ್ಷದೊಳಗೆ: ದಯಾನಂದ (ಸಕಲೇಶಪುರ) ಪ್ರಥಮ, ಆರಾಧ್ಯ (ಬೇಲೂರು), ದ್ವಿತೀಯ ಹಾಗೂ ರವಿ ಬೆಟ್ಟಸೋಗೆ(ಅರಕಲಗೂಡು) ತೃತೀಯ ಸ್ಥಾನ ಪಡೆದರು.೬೦ ವರ್ಷದೊಳಗೆ: ಪ್ರದೀಪ್ ಆಲೂರು ಪ್ರಥಮ, ಅತಿಖುರ್ ರೆಹಮಾನ್, ದ್ವಿತೀಯ ಹಾಗೂ ಎಸ್.ಎಂ.ಮಂಜುನಾಥ್ ಸಕಲೇಶಪುರ ತೃತೀಯ ಸ್ಥಾನ ಪಡೆದರು.೬೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪುಟ್ಟಣ್ಣ ದಿಡಗ ಪ್ರಥಮ, ನಂದೀಶ್ (ಸಿಂಹಧ್ವನಿ), ದ್ವಿತೀಯ, ಕೆ.ಆರ್.ಮಂಜುನಾಥ್ ತೃತೀಯ ಸ್ಥಾನ ಪಡೆದುಕೊಂಡರು. ೧೦೦ ಮೀಟರ್ ಓಟದ ಸ್ಪರ್ಧೆ:೩೦ ವರ್ಷದೊಳಗೆ: ಮಧು (ಪವರ್ ಟಿವಿ), ಪ್ರಥಮ, ಪರಮೇಶ್ ವಡೂರು(ಜನಮಿತ್ರ) ದ್ವಿತೀಯ, ಶರತ್ (ಪ್ರಜೋದಯ) ಮೂರನೇ ಸ್ಥಾನಗಳಿಸಿದರು. ೪೦ ವರ್ಷದೊಳಗೆ: ಅಭಿ ಹೊಳೆನರಸೀಪುರ(ಜ್ಞಾನದೀಪ) ಪ್ರಥಮ, ಲವಕುಮಾರ್ (ವಿಜಯ ಕರ್ನಾಟಕ) ದ್ವಿತೀಯ ಹಾಗೂ ಸಚಿನ್ (ಪವರ್ ಟಿವಿ) ಮೂರನೇ ಸ್ಥಾನ ಪಡೆದರು.೫೦ ವರ್ಷದೊಳಗೆ: ಯೋಗೇಶ್ ಸಕಲೇಶಪುರ(ಜನಮಿತ್ರ) ಪ್ರಥಮ, ಬಿ.ಬಿ.ಜ್ಞಾನೇಶ್ (ಪ್ರಜಾವಾಣಿ) ದ್ವಿತೀಯ ಹಾಗೂ ಸುಧೀರ್ ಸಕಲೇಶಪುರ ಮೂರನೇ ಸ್ಥಾನ ಪಡೆದರು. ೬೦ ವರ್ಷದೊಳಗೆ: ಪ್ರಸನ್ನ (ವಿವಿಸಿ ನ್ಯೂಸ್) ಪ್ರಥಮ, ಅತಿಖುರ್ ರೆಹಮಾನ್( ದ್ವಿತೀಯ) ಹಾಗೂ ಪ್ರದೀಪ್ ಆಲೂರು, ಮೂರನೇ ಬಹುಮಾನ ಪಡೆದರು.೬೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಹೆಚ್.ವಿ.ಸುರೇಶ್ ಕುಮಾರ್, ಹೊಳೆನರಸೀಪುರ( ಪ್ರಜಾವಾಣಿ), ಪುಟ್ಟಣ್ಣ ಹಾಗೂ ಮಂಜಣ್ಣ ಕ್ರಮವಾಗಿ ಮೂರು ಸ್ಥಾನ ಪಡೆದುಕೊಂಡರು.ಮಹಿಳೆಯರ ವಿಭಾಗದಲ್ಲಿ ಅಂಬಿಕಾ (ಸಿಂಹಧ್ವನಿ) ಪ್ರಥಮ, ಕಾವ್ಯ (ಸಿ.ಚಾನೆಲ್) ದ್ವಿತೀಯ ಹಾಗೂ ಇಂದಿರಾಮಣಿ (ಅಮೋಘವಾಣಿ) ಗೆಲುವು ಸಾಧಿಸಿದರು.ಇದಕ್ಕೂ ಮುನ್ನ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ನನ್ನನ್ನು ಸ್ವರೂಪ್ ಪ್ರಕಾಶ್ ಎಂದು ಎಲ್ಲೆಡೆ ಗುರುತಿಸಲು ಮಾಧ್ಯಮದವರೇ ಕಾರಣ. ಪತ್ರಕರ್ತರ ವಾರ್ಷಿಕ ಕ್ರೀಡಾಕೂಟಕ್ಕೆ ಕರೆದಿರುವುದು ಸಂತೋಷ ತಂದಿದೆ. ನಿಮ್ಮ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿ, ಪ್ರತಿ ವರ್ಷ ನಡೆಯುವ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಈ ವರ್ಷ ಇನ್ನಷ್ಟು ಯಶಸ್ವಿಯಾಗಿ ನಡೆಯಬೇಕು ಎನ್ನುವುದು ನನ್ನ ಉದ್ದೇಶ ಎಂದರೆ, ಜಿಲ್ಲಾ ವಾರ್ತಾಧಿಕಾರಿ ವಿನೋದ್ಚಂದ್ರ ಮಾತನಾಡಿ, ಪತ್ರಕರ್ತರು ವ್ಯಕ್ತಿತ್ವ ವಿಕಾಸನಕ್ಕೆ ಪೂರಕ ಕೆಲಸ ಮಾಡುತ್ತಿದ್ದಾರೆ. ಯಾವಾಗಲೂ ಸುದ್ದಿಯಲ್ಲೇ ಮುಳಗಿರುವ ಪತ್ರಕರ್ತರಿಗೆ ಇಂತಹ ಕ್ರೀಡೆಗಳು ಮಾನಸಿಕ ಸ್ಥೈರ್ಯ ತುಂಬಲು ಸಹಕಾರಿಯಾಗಲಿದ್ದು, ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕ್ರಿಕೆಟ್: ಈ ಪಂದ್ಯಾವಳಿಯಲ್ಲಿ ಆರು ತಂಡಗಳು ಭಾಗಿಯಾಗಿದ್ದವು. ಕೆ.ಜಿ.ಸುರೇಶ್ ನಾಯಕತ್ವದ ಕಾವೇರಿ ತಂಡ ಪ್ರಥಮ, ಕೆ.ಬಿ.ಮಂಜುನಾಥ್ ನೇತೃತ್ವದ ಸೂಪರ್-೧೧ ದ್ವಿತೀಯ ಹಾಗೂ ಬಿ.ಆರ್.ಬೊಮ್ಮೇಗೌಡ ನಾಯಕತ್ವದ ಹೇಮಾವತಿ ತಂಡ ಮೂರನೇ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ಶುಭ ಹಾರೈಸಿದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್.ಬಿ.ಮದನಗೌಡ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು. ಈ ವೇಳೆ ಜಿಲ್ಲಾ ಪತ್ರಸಂಘದ ಮಾಜಿ ಅಧ್ಯಕ್ಷರಾದ ಕೆ.ಆರ್.ಮಂಜುನಾಥ್, ಲೀಲಾವತಿ, ರವಿ ನಾಕಲಗೂಡು, ಬಿ.ಆರ್.ಉದಯಕುಮಾರ್, ಉಪಾಧ್ಯಕ್ಷ ಹಾಗೂ ಕ್ರೀಡಾಕೂಟದ ಸಂಘಟಕರಾದ ಕೆ.ಚ್.ಹೆಚ್.ವೇಣುಕುಮಾರ್, ಶಶಿಧರ್ ಬಿ.ಸಿ. ಕಾರ್ಯದರ್ಶಿಗಳಾದ ಕೆ.ಎಂ.ಹರೀಶ್, ಮೋಹನ್ ಕುಮಾರ್ ಹೆಚ್.ಟಿ. ನಟರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಹೆತ್ತೂರು ನಾಗರಾಜ್, ಬಿ.ಆರ್.ಬೊಮ್ಮೇಗೌಡ, ಕೆ.ಬಿ.ಮಂಜುನಾಥ್, ಅತಿಖುರ್ ರೆಹಮಾನ್, ಹಿಂದೂ ಪ್ರಕಾಶ್, ಖುಷ್ವಂತ್, ರಾಷ್ಟ್ರೀಯ ಮಂಡಳಿ ಸದಸ್ಯ ಜಿ.ಪ್ರಕಾಶ್ ಮೊದಲಾದವರಿದ್ದರು.


