
ಪ್ರಕಟಣೆ…2022 -23ನೇ ಶೈಕ್ಷಣಿಕ ವರ್ಷದಲ್ಲಿ ಸಕಲೇಶಪುರ ತಾಲ್ಲೂಕಿನ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ತರಗತಿಯಲ್ಲಿ ಪ್ರಥಮ ಬಾರಿಗೆ/ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರಾತಿಗಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್ ಸಟ್ ಗೆ ಭೇಟಿ ನೀಡಿ. https://sw.kar.nic.in/swprizemoney/Home.aspx? Return Url=2fswprizemoney%2f ಲಿಂಕ್ ಮೂಲಕ ಅರ್ಜಿ ಸಲ್ಲಿಸಿ ಅರ್ಜಿಯ ಪ್ರಿಂಟ್ ಔಟ್ ಜೊತೆಗೆ ದೃಢೀಕೃತ ಎಸ್ ಎಸ್ ಎಲ್ ಸಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ ,ಜಾತಿ ಪ್ರಮಾಣ ಪತ್ರ ,ಆಧಾರ್ ಪ್ರತಿ ,ಬ್ಯಾಂಕ್ ಪಾಸ್ ಬುಕ್ ಪ್ರತಿಯೊಂದುಗೆ ಎಲ್ಲಾ ದಾಖಲಾತಿಗಳನ್ನು ಮಾನ್ಯ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಡಾ. ಬಿ ಆರ್ ಅಂಬೇಡ್ಕರ್ ಭವನ, ಎಸ್‌ಬಿಜಿ ಟಾಕೀಸ್ ಎದುರು, ಹಾಸನ ರವರ ಕಚೇರಿಗೆ ಸಲ್ಲಿಸಲು ಡಾ. ಆನಂದ್ ಮೂರ್ತಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಸಕಲೇಶಪುರ ರವರು ಪ್ರಕಟಣೆಯಲ್ಲಿ ಕೋರಿರುತ್ತಾರೆ.
