ಸಕಲೇಶಪುರ : ಕಾಡಾನೆಯೊಂದು ಕಾಫಿ ತೋಟದಲ್ಲಿ ಆರ್ ಆರ್ ಟಿ ಸಿಬ್ಬಂದಿಯನ್ನು ಅಟ್ಟಾಡಿಸಿದ ಘಟನೆ ತಾಲೂಕಿನ ಬೆಳಗೋಡು ವ್ಯಾಪ್ತಿಯ ಕಿರೆಹಳ್ಳಿ ಗ್ರಾಮದಲ್ಲಿ ನಡೆದಿದೆ ಕಾಡಾನೆಯ ಚಲನವಲನವನ್ನು ಕಾಫಿ ತೋಟದಲ್ಲಿ ಗಮನಿಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಆರ್ ಆರ್ ಟಿ ಸಿಬ್ಬಂದಿ ಪ್ರವೀಣ್ ಎಂಬುವರನ್ನು ಅಟ್ಟಾಡಿಸಿಕೊಂಡು ಬಂದಿದ್ದು ಪ್ರವೀಣ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಈ ವಿಡಿಯೋ ಅಧಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರಿಂದಾಗಿ ಕಿರಳ್ಳಿಯ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ತೋಟಕ್ಕೆ ಹೋಗಲು ಭಯಪಡುತ್ತಿದ್ದು ಕೂಡಲೇ ಈ ಕಾಡಾನೆಯನ್ನು ಸೆರೆಹಿಡಿಯಬೇಕೆಂದು ತೋಟದ ಮಾಲೀಕರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *