
ಸಕಲೇಶಪುರ ಸಕಲೇಶಪುರ ತಾಲ್ಲೂಕಿನ ಉದೇವಾರ ಗ್ರಾಮದಲ್ಲಿ ಬಿಜೆಪಿ ಶಕ್ತಿ ಕೇಂದ, ಉದಯವಾರ ಗ್ರಾಮಪಂಚಾಯಿತಿ, ಕಾಫಿ ಬೆಳೆಗಾರರ ಸಂಘ, ಉದಯವಾರ ಗ್ರಾಮಸ್ಥರಿಂದ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಸಿಮೆಂಟ್ ಮಂಜುನಾಥ್ ರವರಿಗೆ ಸನ್ಮಾನ ಮಾಡಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಶಾಸಕರು ಜನರು ಬದಲಾವಣೆ ಬಯಸಿ ನನ್ನನ್ನು ಗೆಲ್ಲಿಸಿದ್ದಾರೆ ಪ್ರಾಮಾಣಿವಾಗಿ ಮತ್ತು ದಕ್ಷತೆಯಿಂದ ಕೆಲಸ ಮಾಡುತ್ತೇನೆ ಗ್ರಾಮಗಳಿಗೆ ಬೇಕಾದ ಮೂಲಭೂತ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.ಈ ಕಾರ್ಯಕ್ರಮದಲ್ಲಿ ಉದೇ ವಾರ ಪಂಚಾಯತಿಯ ಅಧ್ಯಕ್ಷರಾದ ಮೈತ್ರಿ, ಉಪಾಧ್ಯಕ್ಷರಾದ ಕಲ್ಯಾಣಿ, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಗಾಯತ್ರಿ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್, ಉಪಾಧ್ಯಕ್ಷರಾದ ತಮ್ಮಯ್ಯ, ಉದಯವಾರ ಶಕ್ತಿ ಕೇಂದ್ರದ ಅಧ್ಯಕ್ಷರಾದ ನಾಗೇಂದ್ರ, ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷರಾದ ಶಶಿ ಕುಮಾರ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ರಾಜ್ ಕುಮಾರ್ ಇನ್ನಿತರು ಇದ್ದರು.


