
ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಬ್ಯಾದನೆ ಗ್ರಾಮದ ಅಲಿಮಾ ಎಂಬುವವರ ಮನೆಯ ಬಾಗಿಲು ನಿಂದ ಐದು ಅಡಿ ಅಂತರದಲ್ಲಿ ಇರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ನಿಂದ ಹಲವು ಬಾರಿ ಬೆಂಕಿ ಅನಾಹುತ ಆಗಿದೆ .ಈ ಟ್ರಾನ್ಸ್ಫಾರ್ಮರ್ ಅನ್ನು ಸ್ಥಳಾಂತರ ಮಾಡಿ ಎಂದು ಚೆಸ್ಕಾಂ ಗೆ ಮನವಿ ಮಾಡಿದರು ಸಹ ಮಾಡಿಲ್ಲಾ. ಕಳೆದ ಆರು ತಿಂಗಳ ಹಿಂದೆ ಮನೆಗೆ ಬೆಂಕಿ ಹತ್ತಿಕೊಂಡಿತ್ತು ವಿಷಯ ತಿಳಿದು ಚೆಸ್ಕಾಂ ಇಲಾಖೆಯ ಎ.ಇ. ಇ. ಚಂದ್ರಮ್ಮ ಮುಂದಿನ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ಕೊಟ್ಟರು ಆದರೂ ಇದುವರೆಗೂ ಸ್ಥಳಕ್ಕೆ ಬಾರದ ಅಧಿಕಾರಿಗಳು. ಮುಂದಿನ ದಿನಗಳಲ್ಲಿ ಅನಾಹುತ ಆಗುವ ಮುನ್ನವೇ ಈ ಬಡ ಕುಟುಂಬಕ್ಕೆ ಪರಿಹಾರ ದೊರಕಿಸಿ ಕೊಡಬೇಕೆಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೇಲೂರು ಚೆಸ್ಕಾಂ ಇಲಾಖೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಬ್ಯಾದನೆ ಗ್ರಾಮಸ್ಥರು ಹಾಗೂ ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾರ್ವೆ ಎಚ್ಚರಿಕೆ ನೀಡಿದ್ದಾರೆ.


