
ಸರ್ವಧರ್ಮ ಸಮಾನತೆ ಸಾರಿದ ಬಸವಣ್ಣನವರ ಹಾಗು ಸಾಮಜಿಕ ನ್ಯಾಯ ನೀಡಿದ ಕೆಂಪೇಗೌಡರ ಪ್ರತಿಮೆ ಸಕಲೇಶಪುರ ಪಟ್ಟಣದಲ್ಲಿ ನಿರ್ಮಿಸುವ ವಿಚಾರಕ್ಕೆ ಅಧಿಕಾರಿಗಳು ಪ್ರತಿರೋಧಿಸಿರುವುದು ಖಂಡನೀಯ.ವೀರಶೈವ ಹಾಗು ಒಕ್ಕಲಿಗ ಸಂಘಗಳು ಮಾತ್ರ ಯಾಕೆ ಹೊಣೆಗಾರಿಕೆ ಹೊತ್ತುಕೊಳ್ಳಬೇಕು ?ಸರ್ಕಾರದ ಅಂಗವಾದ ಅಧಿಕಾರಿಗಳು ಸಂಘದವತಿಂದ ಪ್ರತಿಮೆ ನಿರ್ಮಾಣ ಮಾಡಲು ಹೊರಟಾಗ ಪ್ರತಿರೋಧವನ್ನು ಒಡ್ಡಿದರೆ, ಸರ್ಕಾರ ಈ ಮಹನೀಯರ ಹೆಸರಲ್ಲಿ ಜಯಂತಿ ಆಚರಣೆ ಯಾವ ಪುರುಷಾರ್ಥಕ್ಕೆ ಆಚರಿಸಬೇಕು ?ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರರ ಪ್ರತಿಮೆ ಹೇಗೆ ಸರ್ಕಾರದ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಹಾಗೆ ಬಸವಣ್ಣ,ಕೆಂಪೇಗೌಡರು ಮತ್ತು ಗೌತಮ ಬುದ್ಧರವರ ಪ್ರತಿಮೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ಸರ್ಕಾರದ ವೆಚ್ಚದಲ್ಲಿ ನಿರ್ಮಿಸಬೇಕು ಇಲ್ಲವಾದರೆ ಆ ಮಹನೀಯರ ಹೆಸರಲ್ಲಿ ಇನ್ನುಮುಂದೆ ಜಯಂತಿಗಳ ಆಚರಣೆ ಮಾಡಬಾರದು .ಸರ್ಕಾರಕ್ಕೆ ಈ ಮಹಾನ್ ಚೇತನಗಳ ಬಗ್ಗೆ ಕಿಂಚಿತ್ತೂ ಗೌರವವಿದ್ದರೆ ಅಧಿಕಾರಿಗಳು ಅವರವರ ತಾಲೂಕು ಕೇಂದ್ರಗಳಲ್ಲಿ ಇದನ್ನ ಅನುಷ್ಠಾನ ಮಾಡುವ ಹಾಗೆ ಆದೇಶ ಹೊರಿಡಿಸಲಿ, ಇಲ್ಲವಾದಲ್ಲಿ ಮಹನೀಯರ ಜಯಂತಿಗಳ ಆಚರಣೆಯನ್ನ ಸರ್ಕಾರದ ಕಾರ್ಯಕ್ರಮ ಪಟ್ಟಿಯಿಂದ ಕೈಬಿಡಲಿ.
