ಸಕಲೇಶಪುರ : ಪಟ್ಟಣದ ಪಯೋನೀರ್ ಪಬ್ಲಿಕ್ ಶಾಲೆಯ ವತಿಯಿಂದ ಇಂದು ಪೋಷಕರ ದಸರಾ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.

ಶಾಲಾ ಪೋಷಕರ ದಸರಾ ಉದ್ಘಾಟನೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಪುರಸಭಾ ಸದಸ್ಯ ಸಮೀರ್ ಉದ್ಘಾಟಿಸಿದರು.

ಮೊಟ್ಟ ಮೊದಲ ಬಾರಿಗೆ ಪೋಷಕರ ದಸರಾ ಕಾರ್ಯಕ್ರಮವನ್ನು ಶಾಲೆಯಲ್ಲಿ ಆರಂಭ ಮಾಡಿದ್ದು ಪೋಷಕರಿಗೆ ಮಹಿಳಾ ವಿಭಾಗದಲ್ಲಿ ಗಂಗೋಲಿ ಸ್ಪರ್ಧೆ, ಥ್ರೋ ಬಾಲ್, ಪುರುಷರಿಗೆ ಗುಂಡು ಎಸೆತ ಮತ್ತು ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು

ಮಕ್ಕಳೊಂದಿಗೆ ದಸರಾ ಕಾರ್ಯಕ್ರಮಕ್ಕೆಆಗಮಿಸಿದ ಪೋಷಕರು ಖುಷ್ ಖುಷಿಯಾಗಿ ಕ್ರೀಡೆಯಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ SVG ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಪಯೋನೀರ್ ಪಬ್ಲಿಕ್ ಸ್ಕೂಲ್ ಚೇರ್ಮನ್ ‌ ವಿಶ್ವನಾಥ್ ಶೇಷಾಚಲ, ಪಯೋನೀರ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಶೃತಿ ವಿಶ್ವನಾಥ್, ಪಯೋನೀರ್ ಪಬ್ಲಿಕ್ ಸ್ಕೂಲ್ ನ ಮುಖ್ಯೋಪಾಧ್ಯಾಯ ಹರೀಶ್ ಕುಮಾರ್ ದೈಹಿಕ ಶಿಕ್ಷಕ ಉಮೇಶ್, ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *