
ಸಕಲೇಶಪುರ: ಬೆಂಗಳೂರು ಹಾಸನ ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಬೇಕು ಹಾಗೂ ಸುರಕ್ಷತಾ ಫಲಕಗಳನ್ನು ಹಾಕುವ ಮೂಲಕ ಅಪಘಾತ ತಪ್ಪಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಶಾಸಕ ಸಿಮೆಂಟ್ ಮಂಜುನಾಥ್ ಮನವಿ ಮಾಡಿದ್ದಾರೆ.ಬುಧವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಿಲ್ಲಾ ಯೋಜನಾ ನಿರ್ದೇಕರನ್ನು ಬೇಟಿಮಾಡಿ ಈಗಾಗಲೆ ಸಕಲೇಶಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 50 ಕಿ.ಮೀ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿರುವುದು ಸಂತೋಷದ ವಿಷಯ ಆದರೆ ಸದರಿ ಕಾಮಗಾರಿಗಳು ಅಲ್ಲಲ್ಲಿ ಹಂತ ಹಂತವಾಗಿ ರಸ್ತೆ ಕಾರ್ಯ ಪ್ರಗತಿಯಲ್ಲಿ ನಡೆಯುತ್ತಿರುವುದರಿಂದ ರಾತ್ರಿ ಸಮಯದಲ್ಲಿ ತಿರುವುಗಳಲ್ಲಿ ವಾಹನಗಳ ಅಪಘಾತಗಳು ಸಂಭವಿಸುತ್ತಿವೆ ಈ ಅಪಘಾತಗಳನ್ನು ತಪ್ಪಿಸಲು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಕ್ರಮವಹಿಸಬೇಕು ತಿರುವುಗಳಲ್ಲಿ ನಾಮಫಲಕ ಅಳವಡಿಸುವ ಮೂಲಕ ಸಾವು ನೋವುಗಳನ್ನು ತಪ್ಪಿಸಬೇಕು ಸಾರ್ವಜನಿಕರು, ಶಾಲಾ ಕಾಲೇಜು ವಿಧ್ಯಾರ್ಥಿಗಳು ಜೀವಭಯದಿಂದ ರಸ್ತೆಯಲ್ಲಿ ಓಡಾಡುತ್ತಿದ್ದು ಕೂಡಲೇ ಕಾಮಾಗಾರಿಯನ್ನು ತ್ವರಿತಗತಿಯಲ್ಲಿ ಮಾಡುವುದು ಮತ್ತು ತಿರುವುಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಮನವಿ ಸಲ್ಲಿಸಿದರು.
