
ಸರ್ವರ್ ಪ್ರಾಬ್ಲಮ್ ಪಡಿತರ ಪಡೆಯಲು ಸಾಲುಗಟ್ಟಿ ನಿಂತ ಜನ.ಇಂದು ಬೆಳಗ್ಗೆಯಿಂದ ಪಡಿತರ ಪಡೆಯುವ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಸಾಲುಗಟ್ಟಿ ಗಂಟೆಗಟ್ಟಲೆ ಜನ ಕಾಯುವ ಪರಿಸ್ಥಿತಿ ಉಂಟಾಯಿತು ,ಈಗಾಗಲೇ ಸರ್ಕಾರವು ಜೂನ್ 28, 29 ಹಾಗೂ 30 ರಂದು ಸರ್ವರ್ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ ಆದರೆ ಈಗಲೇ ಸರ್ವರ್ ಇಲ್ಲದೇ ಇರುವ ಕಾರಣ ಮುಂದೆ ಇದೇ ರೀತಿಯಾದರೆ ಜನರಿಗೆ ಪಡಿತರ ವಿತರಣೆ ಮಾಡುವುದು ಹೇಗೆ ಎಂಬ ಚಿಂತೆ ನ್ಯಾಯಬೆಲೆ ಅಂಗಡಿಯರನ್ನು ಕಾಡುತ್ತಿದೆ.




