
ಸಕಲೇಶಪುರ ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿಯ ವತಿಯಿಂದ ಇಂದು ಪಟ್ಟಣದ ಓಂ ಮಂದಿರದಲ್ಲಿ ನೂತನ ಶಾಸಕರಾದ ಸಿಮೆಂಟ್ ಮಂಜುನಾಥ್ ಅವರಿಗೆ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.ಇದೆ ಸಂದರ್ಭದಲ್ಲಿ ತಾಲೂಕಿನಲ್ಲಿ ಶ್ರೀ ನಾರಾಯಣ ಗುರು ಭವನ ನಿರ್ಮಾಣ ಮಾಡಿಕೊಡುವಂತೆ ಶಾಸಕರಿಗೆ ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ಶಿವು, ಖಜಾಂಚಿ ದಿನೇಶ್, ಕೃಷ್ಣಪ್ಪ ಪೂಜಾರಿ, ಮಹಿಳಾ ಅದ್ಯಕ್ಷೆ ಕವಿತಾ, ಯುವ ಅದ್ಯಕ್ಷ ಪ್ರತಾಪ್ ಪೂಜಾರಿ ಕಾರ್ಯದರ್ಶಿ ಅಕ್ಷಯ್ ಇತರರು ಇದ್ದರು.




