
ಸಕಲೇಶಪುರ:- ಸಕಲೇಶಪುರ ತಾಲೂಕು ಬೆಳಗೋಡು ಹೋಬಳಿಯ ಕುಣಿಗನ ಹಳ್ಳಿ ಗ್ರಾಮಪಂಚಾಯಿತಿಯ ಹೆಗ್ಗೋವೆಯಲ್ಲಿ ಶ್ರೀ ಸತ್ಯ ನಾರಾಯಣ ಸ್ವಾಮಿಯ 48 ನೇ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ಭಕ್ತಿ ಭಾವದ ಸಂಭ್ರಮದಿಂದ ಗ್ರಾಮಸ್ಥರು ಆಚರಿಸಿದರು.ಇತಿಹಾಸ ಪ್ರಸಿದ್ದ ಶ್ರಿ ಸತ್ಯ ನಾರಾಯಣ ಸ್ವಾಮಿ ದೇವರು ತನ್ನದೇ ಆದ ಪುರಾತನ ಇತಿಹಾಸ ಹೊಂದಿದ್ದು.ಹೊಸದಾಗಿ ನಿರ್ಮಾಣವಾದ ದೇವಸ್ಥಾನಕ್ಕೆ ವಿಧಿವಿಧಾನಗಳಂತ್ತೆ ದೇವಸ್ಥನ ಉದ್ಘಾಟನೆಯ 48 ದಿನಗಳ ಬಳಿಕ ಶಕ್ತಿ ತುಂಬಿದ 5 ದೇವರನ್ನು ಇಂದು ವಿಶೇಷವಾಗಿ ಪೂಜೆ ಮಾಡುವುದರೊಂದಿಗೆ ಅದ್ದೂರಿಯಾಗಿ ನೆರವೇರಿಸಿದರು.ಇತರ ಪ್ರಯುಕ್ತ ಗ್ರಾಮದವರು ಕಟ್ಟು ನಿಟ್ಟಿನ ದೇವರ ನಿಯಮವನ್ನು ಕೈಗೊಂಡು ಬೆಳಗ್ಗೆ 5 ಗಂಟೆಗೆ ಕಳಸ ಹೊತ್ತು ಬಂದ ಗ್ರಾಮದ ಮಹಿಳೆಯರು ದೇವರಿಗೆ ಅಭಿಷೇಕ ಮಾಡುವುದರೊಂದಿಗೆ ಶುರುವಾದ ದೇವರ ಕಾರ್ಯಕ್ರಮ ನಂತರ ಹೋಮ ಹವನಗಳನ್ನು ಮಾಡಿ ಶಕ್ತಿ ತುಂಬಿದ ದೇವರನ್ನು ವಿಶೇಷವಾಗಿ ಪೂಜೆ ಮಾಡಲಾಯಿತು.ನಂತರ ದೇವರಿಗೆ ವಿವಿಧ ರೀತಿಯ ಪುಷ್ಪಾಲಂಕಾರ ಮಾಡುವುದರೊಂದಿಗೆ ಪೂಜೆ ಕಾರ್ಯಕ್ರಮ ನಡೆದು,ನೆರೆದಿದ್ದ ಭಕ್ತಾದಿಗಳು ದೇವರಿಗೆ ಹಣ್ಣು ಕಾಯಿ ಪೂಜೆ ನೆರವೇರಿಸಿದರು.ನಂತರ ದೇವರ ಪ್ರಸಾದ ವಿತರಣೆ ಮಾಡಲಾಯಿತು.ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಊರಿನ ನೂರಾರು ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಪುನೀತರಾದರು.



