
ಆಲೂರು : ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿಗಳಾದ ಕನ್ನಡ ಪರ ಹೋರಾಟ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮಾಡುತ್ತಿರುವ ರಘು ಪಾಳ್ಯ ಇವರಿಗೆ ಕರ್ನಾಟಕ ಜನಪದ ಪರಿಷತ್ ಬೆಂಗಳೂರು, ಜಿಲ್ಲಾ ಜನಪದ ಪರಿಷತ್ ಹಾಸನ ತಾಲೂಕು ಘಟಕ ಆಲೂರು ಹಾಸನ ಜಿಲ್ಲೆ, ಹಾಗೂ ಆಲೂರು ಪದವಿ ಕಾಲೇಜ್ಇವರ ವತಿಯಿಂದ ಇಂದು ನಡೆದ ಜಾನಪದ ಗೀತಾ ಸಂಭ್ರಮ 2026 ಕಾರ್ಯಕ್ರಮದಲ್ಲಿ ರಘು ಪಾಳ್ಯವರಿಗೆ,, ವೀರ ಕನ್ನಡಿಗ ,,, ಎಂಬ ಪುರಸ್ಕಾರ ನೀಡಿ ಗೌರವಿಸಲಾಯಿತು
ಇದೇ ಸಂದರ್ಭದಲ್ಲಿ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಜಾನಪದ ಗಾಯಕರು ಆದ ಹಂಪನಲ್ಲಿ ತಿಮ್ಮೇಗೌಡ, ಹಿರಿಯ ಜನಪದ ಆಯ್ಕೆಗಳಾದ ಮೆಟ್ಟಿಕೆರೆ ಹಿರಿಯಣ್ಣನವರು, ಪ್ರಾಂಶುಪಾಲರಾದ ಪುಟ್ಟರಾಜು ರವರು ಆಲೂರು ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಬಿ ಮಂಜೇಗೌಡ, ರಮೇಶ್ ಕೆಎನ್ , ಸಾಹಿತಿಗಳಾದ ಕಮಲಮ್ಮ, ಸಾಹಿತಿಗಳ ಹರೀಶ್ ಮಡಬಲು, ಹಾಗೂ ಹಾಗೂ ಜಿಲ್ಲೆಯ ವಿಧದ ತಾಲೂಕುಗಳಿಂದ ಜನಪದ ಗಾಯಕರು ಆಗಮಿಸಿದ್ದರುಉಪನ್ಯಾಸಕರಾದ ರಾಘವೇಂದ್ರ, ಸರಿತಾ, ನಟರಾಜು ಹಾಗೂ ಸನ್ಮಾನಿತರು , ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.


