ಸಕಲೇಶಪುರ, ಜು. 3: ದಿವಂಗತ ನಾರ್ವೆ ರಾಜಶೇಖರ್ ಅವರ ಪವಿತ್ರ ಸ್ಮರಣಾರ್ಥ ಅವರ ಬಹುಮುಖ ಪ್ರತಿಭೆ, ಕ್ರಿಯಾಶೀಲ ಜೀವನ ಹಾಗೂ ಛಾಯಾಚಿತ್ರ, ಸಾಹಿತ್ಯ ಸಂಶೋಧನೆ, ಕೃಷಿ ಮತ್ತು ಪರಿಸರ ಹೋರಾಟದ ಕ್ಷೇತ್ರಗಳಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸುವ ನುಡಿನಮನ ಕಾರ್ಯಕ್ರಮವು ಶುಕ್ರವಾರ ಸಕಲೇಶಪುರದ ಲಯನ್ಸ್ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದಿವಂಗತ ರಾಜಶೇಖರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ನಮನ ಅರ್ಪಿಸಲಾಯಿತು. ಬಳಿಕ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ರಾಜಶೇಖರ್ ಅವರು ಛಾಯಾಗ್ರಾಹಕರಾಗಿ, ಸಾಹಿತ್ಯ ಸಂಶೋಧಕರಾಗಿ, ಕೃಷಿಕರ ಪರ ಹೋರಾಟಗಾರರಾಗಿ ಹಾಗೂ ಪರಿಸರ ಸಂರಕ್ಷಣೆಯ ಕಾಳಜಿಯುಳ್ಳ ಸಮಾಜಮುಖಿ ವ್ಯಕ್ತಿಯಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ದೇವರಾಜ್ ಅವರು, ರಾಜಶೇಖರ್ ಅವರ ಜೀವನ, ಅವರ ಸಾಧನೆಗಳು ಹಾಗೂ ಸಮಾಜದೊಂದಿಗೆ ಹೊಂದಿದ್ದ ಬಾಂಧವ್ಯವನ್ನು ನೆನಪಿಸಿಕೊಂಡು ಭಾವುಕರಾದರು.

ರಕ್ಷಿದಿ, ಪ್ರಸಾದ್, ವೇಣುಗೋಪಾಲ್, ಮೀನಾಕ್ಷಿ ಹಾಗೂ ಖಾದರ್ ಅವರು ಮಾತನಾಡಿ, ರಾಜಶೇಖರ್ ಅವರ ಸರಳ ವ್ಯಕ್ತಿತ್ವ, ಸೃಜನಶೀಲ ಚಿಂತನೆ, ಸಾಮಾಜಿಕ ಬದ್ಧತೆ ಮತ್ತು ಪರಿಸರ ಸಂರಕ್ಷಣೆಯ ಕಾರ್ಯಗಳು ಸದಾ ಸ್ಮರಣೀಯವಾಗಿರಲಿವೆ ಎಂದು ಹೇಳಿದರು. ಅವರು ಹಾಕಿಕೊಟ್ಟ ಆದರ್ಶಗಳನ್ನು ಮುಂದಿನ ಪೀಳಿಗೆ ಅನುಸರಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಚ್. ಎ. ರಾಮಚಂದ್ರ, ನಾರಾಯಣ ಆಳ್ವ, ಸಾರಂಗ್ ನಾರ್ವೆ, ಮಲ್ನಾಡ್ ಮೆಹಬೂಬ್, ಸಂದೇಶ್, ಬಾಲಕೃಷ್ಣ, ಸಂಪತ್, ಸಿ. ಆರ್. ಪೌಲ್, ಜಯೇಂದ್ರ ಕುಮಾರ್,ದಯಾನಂದ, ತಿರುಪಾಲ್, ರಘು, ನೇತ್ರಾವತಿ ಮಂಜುನಾಥ್, ಅಬ್ದುಲ್ ಖಾದರ್ ಸೇರಿದಂತೆ ಅನೇಕ ಗಣ್ಯರು, ಸ್ನೇಹಿತರು, ಬಂಧುಗಳು , ಹಾಲಪ್ಪ, ಮಾಸವಳ್ಳಿ ಚಂದ್ರು, ಸಾರ್ವಜನಿಕರು ಭಾಗವಹಿಸಿ ದಿವಂಗತರಿಗೆ ಭಾವಪೂರ್ಣ ನಮನ ಸಲ್ಲಿಸಿದರು.

ಬೆಳಿಗ್ಗೆ 11.30ಕ್ಕೆ ಆರಂಭವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು, “ಅವರ ನೆನಪು ನಮ್ಮ ಹೃದಯಗಳಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿರಲಿದೆ” ಎಂದು ಗೌರವದಿಂದ ಸ್ಮರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *