
ಸಕಲೇಶಪುರ : ಸುಭಾಷ್ ಮೈದಾನದಲ್ಲಿ ಇತ್ತೀಚೆಗೆ ನಡೆದ ಬೆಳಗೋಡು ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಶ್ರೀರಂಗನಾಥ ಪ್ರೌಢಶಾಲೆ, ಬಾಳ್ಳುಪೇಟೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಪ್ರದರ್ಶಿಸಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಸಾಧನೆವಿದ್ಯಾರ್ಥಿನಿ ಸಿರಿ ಎತ್ತರ ಜಿಗಿತದಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇತರೆ ಬಾಲಕಿಯರ ಸಾಧನೆ ಹೀಗಿದೆ:100 ಮೀಟರ್ ಓಟ – ಸೌಮ್ಯ ಪ್ರಥಮ ಸ್ಥಾನ
400 ಮೀಟರ್ ಓಟ – ಮೋಕ್ಷಿತ ಎಚ್.ಪಿ. ಪ್ರಥಮ ಸ್ಥಾನ, ಸೌಮ್ಯ ದ್ವಿತೀಯ ಸ್ಥಾನ
600 ಮೀಟರ್ ಓಟ – ಮೋಕ್ಷಿತ ಪ್ರಥಮ, ಸಿಂಚನ ತೃತೀಯಎತ್ತರ ಜಿಗಿತ – ಸೌಮ್ಯ ತೃತೀಯ
ಗುಂಡು ಎಸೆತ – ಸಿಂಚನ ತೃತೀಯ
ತಟ್ಟೆ ಎಸೆತ – ಸಿಂಚನ ತೃತೀಯ4×100 ಮೀಟರ್ ರಿಲೇ – ಸೌಮ್ಯ, ಸಿರಿ, ಮೋಕ್ಷಿತ ಹಾಗೂ ಚೈತನ್ಯ ತಂಡ ಪ್ರಥಮ ಸ್ಥಾನ
ಬಾಲಕಿಯರ ವಾಲಿಬಾಲ್ – ಪ್ರಥಮ ಸ್ಥಾನಬಾಲಕಿಯರ ತ್ರೋಬಾಲ್ – ಪ್ರಥಮ ಸ್ಥಾನ
ಬಾಲಕರ ವಿಭಾಗದಲ್ಲಿ ಸಾಧನೆವಿದ್ಯಾರ್ಥಿ ಹೇಮಂತ್ 100 ಮೀಟರ್ ಓಟದಲ್ಲಿ ಪ್ರಥಮ, 600 ಮೀಟರ್ ಓಟದಲ್ಲಿ ಪ್ರಥಮ ಹಾಗೂ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇತರೆ ಬಾಲಕರ ಸಾಧನೆ:400 ಮೀಟರ್ ಓಟ – ತೇಜಸ್ ಪ್ರಥಮಗುಂಡು ಎಸೆತ – ಶಶಿ ತೃತೀಯತಟ್ಟೆ ಎಸೆತ – ಅಮೃತ್ ಪ್ರಥಮ, ಸೃಜನ್ ತೃತೀಯಬಾಲಕರ ವಾಲಿಬಾಲ್ – ಪ್ರಥಮ ಸ್ಥಾನವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
