ಕೆ.ಹೊಸಕೋಟೆ ಆಲೂರು ತಾಲೂಕು ಮಲ್ಲಾಪುರ ಗ್ರಾ ಪಂ ಸಭಾಂಗಣ ದಲ್ಲಿ ಪೋಷಣ್ ಅಭಿಯಾನದಡಿ ಪೋಷಣ್ ಮಾಸಾಚರಣೆಯನ್ನು ಹಮ್ಮಿಕ್ಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಆಶಾ ಜ್ಯೋತಿ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು. ಮಾತನಾಡಿದ ಅವರು ಸೆಪ್ಟೆಂಬರ್ ಮಾಹೆಯಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳು, ಹದಿಹರೆಯದವರು, ಗರ್ಭಿಣಿ ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವುದರ ಜೊತೆಗೆ ಅವರ ಆರೋಗ್ಯದ ಮಟ್ಟವನ್ನು ಸುಧಾರಿಸುವ ಉದ್ದೇಶವನ್ನೊಳಗೊಂಡಿದೆ. ಇಂತಹ ಕಾರ‍್ಯಕ್ರಮವನ್ನು ಏರ್ಪಡಿಸುವುದರಿಂದ ಗರ್ಭಿಣಿ,ಬಾಣಂತಿಯರು ಹಾಗೂ ಹದಿಹರೆಯದವರಿಗೆ ಪೌಷ್ಟಿಕಾಂಶ ಆಹಾರ ಸೇವನೆಯ ಕುರಿತು ಸಮರ್ಪಕ ಮಾಹಿತಿ ಲಭಿಸಿದಂತಾಗುತ್ತದೆ ಎಂದರು.

ನಿವೃತ್ತ ಸಿ ಡಿ ಪಿ ಓ ಮಲ್ಲೇಶ್ ಮಾತನಾಡಿ ಪೋಷಣ್ ಅಭಿಯಾನದಡಿ ಪೋಷಣ್ ಮಾಸಾಚರಣೆ, ಪೋಷಣ ಶಿಬಿರಗಳು ಸರ್ಕಾರದ ಯೋಜನೆಗಳಾಗಿದ್ದು ಪೋಷಣ ಮಾಸಾಚಾರಣೆಯ ಮೂಲಕ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಗೂ ಹದಿಹರೆಯದವರಿಗೆ ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆ ಜಾಗೃತಿ ಮೂಡಿಸಲಾಗುತಿದೆ ಎಂದರು. ರೈತ ಸಂಘದ ಕಾರ್ಯದರ್ಶಿ ಜಯಣ್ಣ ಮಾತನಾಡಿ ಮಕ್ಕಳು ಅಪೌಷ್ಟಿಕತೆಯಿಂದ ಹೊರಬರಲು ಪೌಷ್ಟಿಕ ಆಹಾರವನ್ನು ಸೇವಿಸಬೇಕು, ಇತ್ತೀಚಿನದಿನಗಳಲ್ಲಿ ಆಹಾರದಲ್ಲಿ ರಾಸಾಯನಿಕ ವಸ್ತುಗಳುಸೇರಿವೆ, ಇನ್ನೊಂದೆಡೆ ಪೋಷಕರು ಮಕ್ಕಳಿಗೆ ಹೆಚ್ಚಾಗಿ ಜಂಕ್ ಫುಡ್ ಕೊಡಿಸುತ್ತಿರುವುದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರು ಹೆಚ್ಚು ಕಾಣಿಸುತ್ತಿದೆ, ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಮೊಳಕೆ ಕಟ್ಟಿದ ಕಾಳು, ಹಣ್ಣು, ಸೊಪ್ಪು,ತರಕಾರಿ ಮೊಟ್ಟೆ,ಹಾಲು, ಪದಾರ್ಥಗಳನ್ನ ಹೆಚ್ಚಾಗಿ ಮಕ್ಕಳಿಗೆ ತಿನ್ನಿಸಬೇಕು ಎಂದರು.

ಕಾರ್ಯಕ್ರಮ ದಲ್ಲಿ ನಿವೃತ್ತ ಸಿ ಡಿ ಪಿ ಒ ಮಲ್ಲೇಶ್, ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಜಯಣ್ಣ ಹೈದೂರು, ಮುಖ್ಯ ಶಿಕ್ಷಕಿ ನಾಗರತ್ನ, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್, ಅಶ್ರಫ್, ಅಂಗನವಾಡಿ ಕಾರ್ಯಕರ್ತೆ ಗಾಯತ್ರಿ, ಅಂಗನವಾಡಿ ಕಾರ್ಯಕರ್ತರು, ಆಶ ಕಾರ್ಯಕರ್ತರು, ಪೋಷಕರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *