ಹಾಸನ: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಮಕ್ಕಳ ಅಭಿವೃದ್ಧಿ ಮತ್ತು ಮೂಲ ಶಿಕ್ಷಣ ಅಭಿವೃದ್ಧಿ ಕಾರ್ಯಕ್ರಮದಡಿ ಹಾಸನ ನಗರದ ಬಿ.ಕಾಟೀಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಚೇರ್‌ಗಳು, ಕುಕ್ಕರ್‌ಗಳು, ತಟ್ಟೆಗಳು, ಲೋಟಗಳು, ಚಾಪೆಗಳು ಸೇರಿದಂತೆ ವಿವಿಧ ಅಗತ್ಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮವನ್ನು ಅಂಗನವಾಡಿ ಕೇಂದ್ರದ ಮುಖ್ಯ ಶಿಕ್ಷಕಿ ಶ್ರೀಮತಿ ಗೌರಮ್ಮ ಉದ್ಘಾಟಿಸಿದರು. ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಅಧ್ಯಕ್ಷ ರೋ!! ಕೆ.ಎಸ್. ಯೋಗೇಶ್ ಅವರು ಮಕ್ಕಳ ಅಭಿವೃದ್ಧಿ ಹಾಗೂ ಮೂಲ ಶಿಕ್ಷಣ ಕ್ಷೇತ್ರದಲ್ಲಿ ರೋಟರಿಯ ಪಾತ್ರದ ಕುರಿತು ಮಾತನಾಡಿದರು.ನಂತರ ರೋಟರಿ ಕ್ಲಬ್ ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ಚೇರ್‌ಗಳು, ಕುಕ್ಕರ್‌ಗಳು, ತಟ್ಟೆಗಳು, ಲೋಟಗಳು, ಚಾಪೆಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಹಾಗೂ ಸುಮಾರು 20 ಪೋಷಕರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದರು.ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ತಾರ, ಕ್ಲಬ್ ಕಾರ್ಯದರ್ಶಿ ರೋ!! ಬಿ.ಎಂ. ದರ್ಶನ್, ಪಾಸ್ಟ್ ಪ್ರೆಸಿಡೆಂಟ್‌ಗಳಾದ ರೋ!! ವೇಣುಗೋಪಾಲ್, ರೋ!! ಸಿದ್ದನಂಜಪ್ಪ, ರೋ!! ವಜ್ರ ಕುಮಾರ್, ರೋ!! ಆದರ್ಶ, ರೋ!! ಪುಷ್ಪ, ರೋ!! ಶೈಲಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೆ ವಿಶೇಷ ಕೊಡುಗೆ ನೀಡಿದ ರೋ!! ಬೂದೇಶ್ ಹಾಗೂ ರೋ!! ಪುಷ್ಪ ಅವರಿಗೆ ರೋಟರಿ ಕ್ಲಬ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.

ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಕ್ಲಬ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *