ಸಕಲೇಶಪುರ : ತಾಲೂಕಿನ ಜೇನು ಪೋಷಕರ ಸಹಕಾರ ಸಂಘ ನಿ. 2025-26ನೇ ಸಾಲಿನಲ್ಲಿ ಒಟ್ಟು ರೂ. 39,76,658-00 ಗಳ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಜೈ ಮಾರುತಿ ದೇವರಾಜ್ ತಿಳಿಸಿದರು.

ತಾಲ್ಲೂಕಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಈ ಸಾಧನೆಗೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರೇ ಕಾರಣ ಎಂದರು. ಮಹಾಸಭೆಯಲ್ಲಿ ಸದಸ್ಯರುಗಳು ಹೆಚ್ಚು ಹೆಚ್ಚು ಜೇನು ಸಾಕಾಣಿಕೆ ಮಾಡಿ ಸಂಘಕ್ಕೆ ನೀಡಿ ಇನ್ನೂ ಹೆಚ್ಚಿನ ಲಾಭಗಳಿಸಲು ಸಹಾಯ ಮಾಡಬೇಕು ಎಂದು ಕೋರಿದರು. ಸಭೆಯಲ್ಲಿ ಆಡಳಿತ ಮಂಡಳಿ ವರದಿಯನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಸತೀಶ್ ರವರು ಮಂಡಿಸಿದರು.

ಎಂ. ಆರ್. ಉದಯ್ ಕುಮಾರ್ ಸ್ವಾಗತ ಕೋರಿದರು. ಶ ಹೆಚ್. ಆರ್. ಪ್ರಮೋದ್ ಕುಮಾ‌ರ್ ವಂದನಾರ್ಪಣೆ ಮಾಡಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಹೆಚ್. ಎಸ್. ಕೃಷ್ಣಗೌಡ, ನಿರ್ದೇಶಕರುಗಳಾದ ಶಹೆಚ್.ಸಿ. ಸುರೇಂದ್ರ, ಎಸ್.ಬಿ.ಕೃಷ್ಣಗೌಡ, ಕೆ.ಪಿ. ಶಶಿಶೇಖರ್, ಎನ್.ಕೆ. ವಿಕ್ರಂ, ಎಂ. ಎಲ್. ಬಸವರಾಜ್, ಯು. ಎಂ. ಜಯರಾಮ್, ಹೆಚ್.ಸಿ. ಹೇಮಂತ್, ಬಿ. ಬಿ. ಸುಂದರಮ್ಮ, ಲತಾ ಬಸವರಾಜ್, ಜೆ.ಎಸ್. ಈರಯ್ಯ, ವಿ.ಆರ್. ನಾಗೇಶ್, ವಸಂತ್, ಡಿ.ಎಸ್. ಬಾಬು ರವರು ಹಾಗೂ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಜಿಲ್ಲಾ ಒಕ್ಕಲಿಗ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಶ್ರೀಯುತ ಜೈ ಮಾರುತಿ ದೇವರಾಜ್ ರವರನ್ನು ಸನ್ಮಾನಿಸಲಾಯಿತು.

ಸಂಘದ ನಿರ್ದೇಶಕರಾದ ಹೆಚ್.ಸಿ.ಸುರೇಂದ್ರ ರವರು ಪ್ಲಾಂಟರ್ಸ್ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರಿಗೂ ಸಂಘದ ಪರವಾಗಿ ಸನ್ಮಾನಿಸಲಾಯಿತು.

ಸಂಘದಿಂದ ನೀಡುವ ಸದಸ್ಯರ ಮಕ್ಕಳಿಗೆ ಶಿಕ್ಷಣ ಪ್ರೋತ್ಸಾಹ ಧನವನ್ನು ಹೆಚ್.ಪಿ.ಗೌರವಿ, ದುಂಡುಗ ರವರಿಗೆ ನೀಡಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *