ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟ ಬಿಸಿಲೆ ಹಾಗೂ ಕಾಡುಮನೆ ಇನ್ನು ಇತರೆ ಸ್ಥಳದ ಕಾಡಿನಲ್ಲಿ ಇರುವಂತಹ ಬೆತ್ತದ ತಳಿಗಳನ್ನು ಕಡಿದು ಬಾಳೆಗದ್ದೆಯ ಜಾವಿದ್ ಎಂಬ ವ್ಯಕ್ತಿಯ ವಿರುದ್ಧ ಅರಣ್ಯ ಇಲಾಖೆಗೆ ಮಾಜಿ ಸೈನಿಕ ಧರ್ಮಪ್ಪ ದೂರು ನೀಡಿದ್ದರು, ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಜಾವಿದ್ ಎಂಬುವವರ ಮೇಲೆ ಅರಣ್ಯ ಕಾಯ್ದೆಯ ಅಡಿಯಲ್ಲಿ (SKP ,FOC NO 34-,2026 ರೋ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ

ಕಾರ್ಮಿಕರನ್ನು ಉಪಯೋಗಿಸಿಕೊಂಡು ರಾಜ ರೋಷವಾಗಿ ವಾಹನಗಳಲ್ಲಿ ತಂದು ಮನೆಯ ಹತ್ತಿರ ಒಣಗಿಸಿ ರಾಜ್ಯದ್ಯಂತ ಬೆತ್ತದ ತಳಿಯ ಫರ್ನಿಚರ್ ಹಾಗೂ ಲಾಠಿಗಳನ್ನು ಮಾರಾಟ ಮಾಡುತ್ತ ಬಂದಿರುತ್ತಾರೆ ಇವರಿಗೆ ಯಾವ ಇಲಾಖೆಯಿಂದಲೂ ಪರವಾನಿಗೆ ಇರುವುದಿಲ್ಲ ಅನಧಿಕೃತವಾಗಿ ಕಾಡಿನ ಸಂಪತ್ತನ್ನು ನಾಶಪಡಿಸುತ್ತಾ ಸರ್ಕಾರಕ್ಕೂ ನಷ್ಟ ಮಾಡುತ್ತಾ ಬಂದಿರುತ್ತಾರೆ ಅದರಿಂದ ಕಾಡಿನ ಸಂಪತ್ತು ಆಗಿರುವ ಬೆತ್ತದ ತಳಿಯನ್ನು ಸಂರಕ್ಷಿಸಲು ಸಕಲೇಶಪುರ ಅರಣ್ಯ ಅಧಿಕಾರಿಗಳು ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಮಾಜಿ ಸೈನಿಕ ಧರ್ಮಪ್ಪ ಅರಣ್ಯ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಜಾವೀದ್ ಅವರು ಮನೆಯ ಹತ್ತಿರ ಒಣಗಲು ಹಾಕಿದ್ದ 330 ಬೆತ್ತಗಳನ್ನು ವಶಪಡಿಸಿಕೊಂಡು, SKP, FOC, NO ,34/2026 ಪ್ರಕರಣ ದಾಖಲಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *