
ಸಕಲೇಶಪುರ:- ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯತಿಯ ಬೆಳಗಾರರ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಎಲ್ಲಾ ಹಿಂದೂ ಬಂದು ಬಾಂದವರು ಸಂಜೆ 6 ಗಂಟೆಗೆ ರಾಷ್ಟ್ರೀಯ ಸ್ವಯಂಸೇವಕರ ಸಂಘದ ವತಿಯಿಂದ “ಗುರು ವಂದನಾ ಪೂಜೆ “ಯನ್ನು ಸಂಭ್ರಮದಿಂದ ಹಾಗೂ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸಂಪರ್ಕ ಪ್ರಮುಖ ಕರಡಿಗಾಲ ಹರೀಶ್ ಉಪಸ್ಥಿತರಿದ್ದು, ಗುರುವಂದನ ಕಾರ್ಯಕ್ರಮದ ಬಗ್ಗೆ ಹಾಗೂ ಪ್ರಸ್ತುತ ರಾಷ್ಟ್ರೀಯ ಸ್ವಯಂಸೇವಕರ ಸಂಘ ರಾಷ್ಟ್ರದಾದ್ಯಂತ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ್ದರು. ಅಲ್ಲದೆ ಸಂಘ ಸ್ಥಾಪನೆಯಾಗಿ 98 ವರ್ಷಗಳಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳನ್ನು ವಿವರಿಸುತ್ತಾ ಮುಂದಿನ ತಿಂಗಳಿಂದ ಪ್ರತಿ ವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಖೆಯನ್ನು ಮಾಡುವಂತೆ ಕರೆ ನೀಡಿದರು.


